ಪರಿಸರ ಉಳಿಸಿ ಬೆಳೆಸಲು ಕೈಜೋಡಿಸೋಣ

hebri (1)
Published on

ಹೆಬ್ರಿ: ಕುಡಿಬೈಲ್ ಕುಚ್ಚೂರು ಹೆಬ್ರಿ ತಾಲೂಕಿನ ಶಾಂತಿನಿಕೇತನ ಯುವವೃಂದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ ಹಾಗೂ ಗಿಡಗಳ ವಿತರಣೆ ಕಾರ್ಯಕ್ರಮ ಕಚೇರಿಯಲ್ಲಿ ಗುರುವಾರ ನಡೆಯಿತು.

ಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡ ನೆಡುವುದಷ್ಟೇ ಅಲ್ಲ, ಅದರ ಪಾಲನೆ ಪೋಷಣೆ ಮಾಡಬೇಕು. ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಕಾರ್ಯದರ್ಶಿ ನಳಿನಿ, ಆಡಳಿತ ಮಂಡಳಿ ಸದಸ್ಯರಾದ ವಿನೋದಾ, ಕೆ.ಗಣೇಶ್, ಕಲಾವತಿ, ಸದಸ್ಯರಾದ ದಿನೇಶ್, ಜಗನ್ನಾಥ್ ನಾಯ್ಕ, ಅಕ್ಕಯ್ಯ, ಚೈತನ್ಯ, ಅರಿವ್, ವನಜ, ಉದಯ, ವಾಣಿಶ್ರೀ, ಮೇಘಶ್ರೀ, ಸನ್ನಿಧಿ, ಸಮರ್ಥ, ಕೃತಿಕಾ, ರಿಷಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net