ಕೋಟ ಮೂರ್ತೆದಾರರ ಸಹಕಾರಿಯಲ್ಲಿ 397 ಕೋಟಿ ರೂ. ವ್ಯವಹಾರ

kota.jun.2 MAHASABHE .p
Published on

ಕೋಟ: ಕೋಟ ಮೂರ್ತೆದಾರರ ಸಹಕಾರಿ ಸಂದ 34ನೇ ಮಹಾಸಭೆ ಇತ್ತೀಚಿಗೆ ಸಂದ ಪ್ರಧಾನ ಕಚೇರಿಯ ಎಸ್.ಬಂಗಾರಪ್ಪ ಸಭಾಂಗಣದಲ್ಲಿ ಜರುಗಿತು.

ಸಂಘವು 2024-25ನೇ ಸಾಲಿನಲ್ಲಿ 397 ಕೋಟಿ ರೂ. ವ್ಯವಹಾರ ನಡೆಸಿ 1.09 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.12 ಲಾಭಾಂಶವನ್ನು ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಘೋಷಿಸಿದರು.

ಸಂವು 13052 ಸದಸ್ಯರ ಬಲ ಹೊಂದಿದ್ದು 1.45 ಕೋಟಿ ರೂ. ಪಾಲು ಬಂಡವಾಳ, 83.86 ಕೋಟಿ ರೂ. ಠೇವಣಿ, 69.07 ಕೋಟಿ ರೂ. ಹೊರಬಾಕಿ ಸಾಲ ಇದ್ದು, ಸಂದಿಂದ ರೂ. 25.84 ಕೋಟಿ ವಿವಿಧ ಸಹಕಾರಿ ಸಂ ಹಾಗೂ ಬ್ಯಾಂಕ್‌ನಲ್ಲಿ ವಿನಿಯೋಗಿಸಿದೆ ಎಂದರು.

ಸದಸ್ಯರಿಗೆ ಸಾಮೂಹಿಕ ವಿಮೆ, ಮರಣ ನಿಧಿ, ಸದಸ್ಯರ ಸಹಾಯಕ ನಿಧಿ ಮೂಲಕ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಹಸ್ತ, ಸದಸ್ಯರ ಕ್ಷೇವಾಭಿವದ್ಧಿ ನಿಧಿಯಿಂದ ಸಾಲ ನೀಡಲಾಗುವುದು ಎಂದು ಸಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ತಿಳಿಸಿದರು.

ಸಭೆಯಲ್ಲಿ ಸಂ ಉಪಾಧ್ಯಕ್ಷ ಜಯರಾಮ ಪೂಜಾರಿ, ವಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಪಿ.ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ.ಸಂಜೀವ ಪೂಜಾರಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ, ಕೃಷ್ಣ ಪೂಜಾರಿ, ಪ್ರಭಾವತಿ ಡಿ., ಭಾರತಿ ಎಸ್.ಪೂಜಾರಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಕೃಷ್ಣ ಹಾಗೂ ಶ್ರೀದೇವಿ ಕಲ್ಕೂರ ಉಪಸ್ಥಿತರಿದ್ದರು.

ಹಿರಿಯ ವ್ಯವಸ್ಥಾಪಕ ಉದಯ ಪೂಜಾರಿ ಸಹಕರಿಸಿದರು. ದಿನೇಶ್ ಪೂಜಾರಿ ಸ್ವಾಗತಿಸಿದರು. ನಿತೇಶ್ ಹಂದಟ್ಟು ವಂದಿಸಿದರು, ರಮೇಶ್ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net