ಒಟಿಟಿಗೆ ಲಗ್ಗೆಯಿಟ್ಟ ಧೋನಿ ನಿರ್ಮಾಣದ 'ಲೆಟ್ಸ್ ​ಗೆಟ್​ ಮ್ಯಾರೀಡ್'

Untitled design - 2023-09-28T165421.948
Published on

ತಮಿಳುನಾಡು: ಭಾರತೀಯ ಕ್ರಿಕೆಟ್​ ತಂಡದ ಶ್ರೇಷ್ಠ ನಾಯಕ, ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್ ಧೋನಿ ಅವರ 'ಧೋನಿ ಎಂಟರ್​ಟೈನ್​ಮೆಂಟ್ಸ್'​ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಚೊಚ್ಚಲ ಸಿನಿಮಾ 'ಲೆಟ್ಸ್​ ಗೆಟ್​ ಮ್ಯಾರೀಡ್'​ ಇದೀಗ ಒಟಿಟಿಗೆ ಪಾದಾರ್ಪಣೆ ಮಾಡಿದೆ.

ಕ್ರಿಕೆಟ್​ ವೃತ್ತಿಯಲ್ಲಿ ಭಾರೀ ಖ್ಯಾತಿ ಗಳಿಸಿರುವ ಎಂ.ಎಸ್. ಧೋನಿ, ಧೋನಿ ನಿರ್ಮಾಣ ಸಂಸ್ಥೆಯನ್ನು ತೆರೆದ ಬೆನ್ನಲ್ಲೇ 'ಲೆಟ್ಸ್​ ಗೆಟ್​ ಮ್ಯಾರೀಡ್'​ ಎಂಬ ಚಲನಚಿತ್ರವನ್ನು ನಿರ್ಮಿಸಿದರು. ಈ ಸಿನಿಮಾ ಧೋನಿ ಎಂಟರ್​ಟೈನ್​ಮೆಂಟ್ಸ್​ನ ಚೊಚ್ಚಲ ನಿರ್ಮಾಣದ ಚಿತ್ರವಾಗಿದ್ದು, ಜುಲೈ 28 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

ಹರೀಶ್ ಕಲ್ಯಾಣ್-ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ ತಮಿಳು ಆವೃತ್ತಿಯ 'ಲೆಟ್ಸ್​ ಗೆಟ್​​ ಮ್ಯಾರೀಡ್'​ ಇದೀಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಗೊಂಡಿದೆ. ತಮಿಳಿನಲ್ಲಿ ಲಭ್ಯವಿರುವ ಈ ಚಿತ್ರದ ತೆಲುಗಿನ ಸ್ಟ್ರೀಮಿಂಗ್ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ.

ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ನದಿಯಾ, ಯೋಗಿ ಬಾಬು, ಮಿರ್ಚಿ ವಿಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net