ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಲೋಕದ ಧ್ರುವತಾರೆ: ತೋಂಟದ ಸಿದ್ಧರಾಮ ಶ್ರೀಗಳು

28GDG02
Published on

ಗದಗ:
ಪುಟ್ಟರಾಜ ಕವಿ ಗವಾಯಿಗಳು ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪ್ರಕಾರದ ಸಂಗೀತದಲ್ಲಿ ಅದ್ಭುತ ಪ್ರತಿಭೆಯನ್ನು ಸಾಧಿಸಿದ್ದರು. ಉಭಯ ಗಾನ ವಿಶಾರದ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಲೋಕದ ಧ್ರುವತಾರೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಮಾನತಾನಡಿದ ಶ್ರೀಗಳು, ಪುಟ್ಟರಾಜ ಕವಿ ಗವಾಯಿಗಳು ಸಂಸತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪರಿಣಿತರು. ವಾರ್ಧಕ, ಭಾಮಿನಿ ಷಟ್ಪಧಿಯಲ್ಲಿ ಕಾವ್ಯ, ಪುರಾಣ ಮತ್ತು ನಾಟಕಗಳನ್ನು ರಚಿಸಿದ್ದಾರೆ. ಕನ್ನಡ ನಾಡು ನುಡಿಗೆ ಅನೇಕ ಸಂಗೀತ ಸಾಧಕರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಅವರದ್ದು. ಸಾವಿರಾರು ಮಕ್ಕಳಿಗೆ ಅನ್ನ, ಆಶ್ರಯ ಕಲ್ಪಿಸಿ ತಮ್ಮ ಇಡೀ ಬದುಕನ್ನೇ ಅಂಧ ಅನಾಥರ ಏಳಿಗೆಗಾಗಿ ಮುಡಿಪಾಗಿಟ್ಟಿದ್ದಾರೆ. ಕಣ್ಣಿಲ್ಲದಿದ್ದವರನ್ನು ಆತ್ಮನಿರ್ಭರರನ್ನಾಗಿ ಮಾಡಿದ್ದಾರೆ ಎಂದು ಶ್ರೀಗಳು ಹೇಳಿದರು.
ಪ್ರಾಧ್ಯಾಪಕ ಡಾ. ಆರ್​. ಎಸ್​. ದಾನರಡ್ಡಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳವರು ತ್ರಿಭಾಷಾ ಪಂಡಿತರಾಗಿ, ಬರಹಗಾರರಾಗಿ, ಆಧ್ಯಾತ್ಮ ಜೀವಿಗಳಾಗಿ, ಸಮಾಜ ಸುಧಾರಕರಾಗಿ ಸಾಕಷ್ಟು ಸ್ಮರಣೀಯ ಕಾರ್ಯಗಳನ್ನು ಮಾಡಿದ್ದಾರೆ. ಸಕಲ ವಿದ್ಯೆಗಳಲ್ಲಿ ಪ್ರಾವಿಣ್ಯರು, ಪ್ರಖ್ಯಾತರು. ನಾಡಿನಾದ್ಯಂತ ಅಪಾರ ಭಕ್ತಸಮೂಹದ ದೃಷ್ಟಿಯಲ್ಲಿ ನಡೆದಾಡುವ ದೇವರು ಎನಿಸಿದ್ದಾರೆ ಎಂದು ತಿಳಿಸಿದರು.
ಶಿವಾನುಭವದಲ್ಲಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 13 ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿಯ ಅಧ್ಯರಾಗಿ ಆಯ್ಕೆಯಾದ ಎಸ್​. ಪಿ. ಸಂಶಿಮಠ, ಶಿವಾನುಭವ ಭಕ್ತಿಸೇವೆಯನ್ನು ವಹಿಸಿದ್ದ ಪಾರ್ವತಿ ಶಿವಪುತ್ರಪ್ಪ ಜಾಗನೂರ ದಂಪತಿ ಹಾಗೂ ಬಸವಣ್ಣೆಮ್ಮ ಶಿವಪ್ಪ ನಡಮನಿ ಪರಿವಾರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net