ಹೈನುಗಾರಿಕೆಯತ್ತ ಇರಲಿ ಯುವಜನತೆ ಒಲವು

kon
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಒಕ್ಕೂಟದಿಂದ ಹೈನುಗಾರರಿಗೆ ಹತ್ತು ಹಲವಾರು ಸವಲತ್ತುಗಳ, ಸೌಲಭ್ಯಗಳು ದೊರೆಯುತ್ತದೆ. ಹುಲ್ಲು ಬೆಳೆಸಲು, ಯಂತ್ರ ಖರೀದಿ, ಮ್ಯಾಟ್ ಖರೀದಿ, ಅಜೋಲ ಬೆಳೆ ಮುಂತಾದ ಹಲವಾರು ಯೋಜನೆಗಳು ದೊರೆಯುತ್ತಿದೆ. ಪ್ರತಿಯೊಂದು ಸೌಲಭ್ಯವನ್ನು ಹೈನುಗಾರರು ಸದುಪಯೋಗಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ ಉಪವ್ಯವಸ್ಥಾಪಕ ಮಾಧವ ಐತಾಳ್ ಹೇಳಿದರು. ಮಂದಾರ್ತಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶೇಡಿಕೊಡ್ಲು ಎಚ್.ವಿಠಲ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂದಾರ್ತಿ ದುರ್ಗಾ ಸಭಾಂಗಣದಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಯುವಜನತೆ ಹೈನುಗಾರಿಕೆಯತ್ತ ಒಲವು ತೋರಬೇಕು. ಉಪಕಸುಬಾಗಿಯೂ ಇದು ಲಾಭದಾಯಕ ಹಾಗೂ ಪಶು ಆಹಾರದ ಗುಣಮಟ್ಟ ಬದಲಾವಣೆ ಮಾಡಿದ್ದು, ದನಗಳ ಗರ್ಭಧಾರಣೆಗೆ ಸಹಕಾರಿಯಾಗುತ್ತದೆ ಎಂದು ಡಾ.ಮಾಧವ ಐತಾಳ್ ಹೇಳಿದರು. ಸಂಘದ ರಾಮ ಶೆಟ್ಟಿಗಾರ್, ಎಂ.ರಾಘವೇಂದ್ರ ಅಡಿಗ, ಗುಲಾಬಿ, ಸಾಕು, ನಾಗೇಶ್ ಕೊಠಾರಿ, ಕೃಷ್ಣಪ್ಪ ಶೆಟ್ಟಿ, ಸದಸ್ಯರು, ಹೈನುಗಾರರು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರ್ದೇಶಕಿ ಸುಪ್ರೀತಾ ಡಿ.ಶೆಟ್ಟಿ ಪ್ರಾರ್ಥಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ದೇವಾಡಿಗ ವರದಿ ವಾಚಿಸಿದರು. ಉಪಾಧ್ಯಕ್ಷ ಶಂಭುಶಂಕರ ರಾವ್ ಸ್ವಾಗತಿಸಿ, ಗೌರವ ಸಲಹೆಗಾರ ಜಯಶೀಲ ಶೆಟ್ಟಿ ನಿರೂಪಿಸಿದರು. ನಿರ್ದೇಶಕ ಕೃಷ್ಣ ನಾಯ್ಕ ವಂದಿಸಿದರು. ಸಂಘಕ್ಕೆ ಅತೀ ಹೆಚ್ಚು ಗುಣಮಟ್ಟದ ಹಾಲು ನೀಡಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net