

ಬೆಳ್ತಂಗಡಿ: ವಿದ್ಯಾಸಂಸ್ಥೆಗಳ ಗ್ರಂಥಾಲಯಗಳು ಜ್ಞಾನದಾಹ ವೃದ್ಧಿಸುವ ಕಾರ್ಯದಲ್ಲಿ ತೊಡಗಬೇಕು. ಗ್ರಂಥಾಲಯ ಕೇವಲ ಪುಸ್ತಕ ಸಂಗ್ರಹಾಲಯವಾಗದೆ ಕಲಿಕೆಯ ಸಂಪನ್ಮೂಲ ಕೇಂದ್ರವಾಗಲಿ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಸ್ಡಿಎಂ ಶಾಲೆಗಳ ಗ್ರಂಥಪಾಲಕರ ಕಾರ್ಯಾಗಾರದಲ್ಲಿ ಇತ್ತೀಚೆಗೆ ಮಾತನಾಡಿದರು.
ಎಸ್ಡಿಎಂ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಮತ್ತು ಕಾಲೇಜಿನ ಮುಖ್ಯಗ್ರಂಥಪಾಲಕಿ ಡಾ.ರಜತ ಪಿ.ಶೆಟ್ಟಿ ಕಾರ್ಯಾಗಾರದ ಅವಲೋಕನ ಪ್ರಸ್ತಾಪಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಲಾರೈನ್ ವಂದಿಸಿದರು.