ಮಕ್ಕಳಿಗೆ ಪಾಲಕರಿಂದ ಸಿಗಲಿ ಸಂಸ್ಕಾರ: ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿಕೆ

Btw_Childrens
Published on

ಬಂಟ್ವಾಳ: ಧರ್ಮ ಸಾಮರಸ್ಯದ ನೆಲವಾದ ಭಾರತದಲ್ಲಿ ಎಲ್ಲಾ ಧರ್ಮಗಳಿಗೂ ಗೌರವ ಕೊಡುವ ಸಂಸ್ಕೃತಿಯಿಂದ ನಮ್ಮ ದೇಶದಲ್ಲಿ ನಾಗರಿಕತೆ ಬೆಳೆದಿದೆ. ಪ್ರಸ್ತುತ ಕಾಲದಲ್ಲಿ ಜನ ಜೀವನ ಪದ್ಧತಿ ಬದಲಾಗಿದ್ದು, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸಂಸ್ಕಾರ ಕೊಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

ಲಕ್ಷ್ಮೀ ವಿಷ್ಣು ಸೇವಾ ಸಂಘ, ಜಾರಂದಗುಡ್ಡೆ ಕಳ್ಳಿಗೆ ಲಕ್ಷ್ಮೀ ವಿಷ್ಣು ಸೇವಾ ಮಾತೃ ಮಂಡಳಿ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಫೆ.8ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಮಾಜ ಸೇವಕ ನಾರಾಯಣ ಹೊಳ್ಳ ಹೊಳ್ಳರಬೈಲುಗುತ್ತು ಅಧ್ಯಕ್ಷತೆ ವಹಿಸಿದರು. ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸುಪ್ರೀತ್ ಆಳ್ವ, ಸಾಮಾಜಿಕ ಕಾಯಕರ್ತೆ ಪ್ರಿಯಾ ದರಿಬಾಗಿಲು, ಸಮಾಜ ಸೇವಕಿ ಶಶಿಪ್ರಭಾ ಗುತ್ತಬಿತ್ತಿಲು, ಹಿಂದು ಮುಖಂಡ ಪ್ರದೀಪ್ ಸರಿಪಲ್ಲ, ಸಂಘದ ಅಧ್ಯಕ್ಷ ಸುಧೀಂದ್ರ ಆಯೆರೆಗುಡ್ಡೆ, ಮಾತೃ ಮಂಡಳಿ ಅಧ್ಯಕ್ಷೆ ನಿಶಾ ಅಶೋಕ್ ಮಾಡಂಗೆ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಪೋಷಕ ಸದಾಶಿವ ಡಿ.ತುಂಬೆ, ಸಮುದಾಯ ಆರೋಗ್ಯ ಅಧಿಕಾರಿ ಲಿನೆಟ್ ಪಿಂಟೊ ಅವರನ್ನು ಗೌರವಿಸಲಾಯಿತು. ಧನುಶ್ರೀ ಜಾರಂದಗುಡ್ಡೆ ಸರ್ಕಾರಿ ಪ್ರೌಢಶಾಲೆ ಅಜ್ಜಿಬೆಟ್ಟು, ಸಾಕ್ಷಿ ಜಾರಂದಗುಡ್ಡೆ ಸರ್ಕಾರಿ ಪ್ರೌಢಶಾಲೆ ಅಜ್ಜಿಬೆಟ್ಟು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಭೇಟಿ ಕೊಟ್ಟು ಶುಭ ಹಾರೈಸಿದರು. ಪ್ರಮುಖರಾದ ಜ್ಯೋತಿಷಿ ಅನಿಲ್ ಪಂಡಿತ್, ಇಂಜಿನಿಯರ್ ಆನಂದ ಬಂಜನ್, ಪ್ರಕಾಶ್ ಶೆಟ್ಟಿ, ಶ್ರೀ ಶೈಲ, ಜಗದೀಶ ಬಂಗೇರ ನೆತ್ತರಕೆರೆ ಮತ್ತಿತರರು ಇದ್ದರು. ದೇವಿ ಪ್ರಸಾದ್ ದೇವಂದಬೆಟ್ಟು ಸ್ವಾಗತಿಸಿದರು. ಸುಧೀರ್ ಜಾರಂದ ಗುಡ್ಡೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಸಾಮೂಹಿಕ ಶ್ರೀ ಶನಿಪೂ, ಅನ್ನಸಂತರ್ಪಣೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ,ಸಂಗೀತ ರಸಸಂಜೆ, ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net