ಮಂಗಳೂರು ಮರಕಡದಲ್ಲಿ ಚಿರತೆ ಪತ್ತೆ

Leapord
Published on

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮರಕಡದಲ್ಲಿ ಭಾನುವಾರ ರಾತ್ರಿ ಚಿರತೆ ಪ್ರತ್ಯಕ್ಷಗೊಂಡಿದೆ. ಮರಕಡ ಸತೀಶ್ ಶೆಟ್ಟಿ ಎಂಬುವರ ಮನೆಯಂಗಳಕ್ಕೆ ಆಗಮಿಸಿದ ಚಿರತೆ ನಾಯಿಯೊಂದನ್ನು ಹೊತ್ತೊಯ್ದಿದೆ. ಇದರಿಂದಾಗಿ ಸ್ಥಳೀಯ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿರತೆಯ ಓಡಾಟದ ಬಗ್ಗೆ ಪರಿಸರ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆಹಿಡಿಯಲು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net