

ಕೋಟ: ಬ್ರಹ್ಮಾವರ ತಾಲೂಕಿನ ಶಿರಿಯಾರ ನೈಲಾಡಿಯಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ಸಾಕು ನಾಯಿಯನ್ನು ಬುಧವಾರ ಮುಂಜಾನೆ ಹೊತ್ತೊಯ್ದಿದೆ.
ನೈಲಾಡಿ ಸದಾಶಿವ ಕುಲಾಲ್ ಅವರ ಮನೆಯ ಅಂಗಳಕ್ಕೆ ನುಗ್ಗಿದ ಚಿರತೆ ಸಾಕು ನಾಯಿಯನ್ನು ಕ್ಷಣಾರ್ಧದಲ್ಲಿ ಹೊತ್ತುಕೊಂಡು ಹೋಗಿದ್ದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದಿನಿಂದಲೂ ಚಿರತೆ ಕಾಟ ವಿಪರೀತ ಆಗಿದ್ದು, ಈ ಘಟನೆ ಜನರಲ್ಲಿ ಭೀತಿ ಹುಟ್ಟಿಸಿದೆ. ಸಾರ್ವಜನಿಕರು ರಾತ್ರಿ ಸಂಚರಿಸುವುದೆ ಕಷ್ಟಕರವಾಗಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಬೋನು ಇಟ್ಟು ಚಿರತೆ ಹಿಡಿಯಲು ಜನರು ಆಗ್ರಹಿಸಿದ್ದಾರೆ.