'ಲಿಯೋ' ನಟಿ ತ್ರಿಶಾ ಕೃಷ್ಣನ್​ ಮುಂದಿನ ಪ್ರಾಜೆಕ್ಟ್​ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್

Untitled design - 2023-09-13T151005.711
Published on

ತಮಿಳುನಾಡು: ದಳಪತಿ ವಿಜಯ್​ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ 'ಲಿಯೋ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ತ್ರಿಶಾ ಕೃಷ್ಣನ್ ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಇದೀಗ ಹೊಸ ಅಪ್ಡೇಟ್​ವೊಂದು ಲಭಿಸಿದೆ.

'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್​ಗೆ ನಾಯಕಿಯಾಗಿ ಸಾಥ್ ನೀಡಿರುವ ತ್ರಿಶಾ ಅವರ ಈ ಸಿನಿಮಾದ ತಾತ್ಕಾಲಿಕ ಬಿಡುಗಡೆ ಅಕ್ಟೋಬರ್​ 19, 2023 ರಂದು ನಿಗದಿಪಡಿಸಲಾಗಿದೆ. ಈ ಬಹುನಿರೀಕ್ಷಿತ ಸಿನಿಮಾದ ರಿಲೀಸ್​ಗೂ ಮುನ್ನ, ತ್ರಿಶಾ ನಟಿಸಿದ 'ದಿ ರೋಡ್'​ ಸಿನಿಮಾವು ಅ.06 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ. ಸದ್ಯ ಈ ಸಂಗತಿ ತಿಳಿದ ನಟಿಯ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.

ಲಿಯೋ ಚಿತ್ರಕ್ಕೂ ಮುನ್ನವೇ ಅರುಣ್​ ವಾಸಿಗರನ್ ನಿರ್ದೇಶನದ 'ದಿ ರೋಡ್‌' ಸಿನಿಮಾದಲ್ಲಿ ಮಿಂಚಲು ತಯಾರಾಗಿದ್ದಾರೆ. ಈ ಚಿತ್ರದ ಮೊದಲ ಸಿಂಗಲ್ ಇದೇ ಸೆಪ್ಟೆಂಬರ್ 14, 2023 ರಂದು ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಹೊಸ ಪೋಸ್ಟರ್​ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net