ನಿಂಬೆ ನೀರು v/s ಜೇನು ತುಪ್ಪದ ನೀರು: ಎರಡು ಪಾನೀಯಗಳಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ..| Health tips

untitled-design-2025-08-27t130041770-68aeb4289ae19
Published on

Health tips: ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯಕರ ಪಾನೀಯಗಳ ಮಹತ್ವ ಹೆಚ್ಚುತ್ತಿವೆ. ದೈಹಿಕ ಆರೋಗ್ಯ ಪಡೆಯಲು ಅನೇಕ ರೀತಿಯ ಪಾನೀಯಗಳ ಮೇಲೆ ಕನರು ಅವಲಂಬಿತರಾಗಿದ್ದಾರೆ. ಈ ಸಾಲಿನಲ್ಲಿ ಜೇನುತುಪ್ಪದ ನೀರು ಮತ್ತು ನಿಂಬೆ ನೀರು ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ ಪಾನೀಯಗಳಾಗಿವೆ.

ಜೇನುತುಪ್ಪದ ನೀರಿನ ಪ್ರಯೋಜನಗಳು

ಜೇನುತುಪ್ಪವು ಸಕ್ಕರೆಗಿಂತ ನೈಸರ್ಗಿಕ ಸಿಹಿಯಾಗಿದ್ದು, ಇದರಲ್ಲಿ ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನೊಂದಿಗೆ ಖನಿಜಗಳು, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಜೇನುತುಪ್ಪದ ನೀರು ಶಕ್ತಿಯ ಮಟ್ಟವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗಂಟಲಿನ ಕಿರಿಕಿರಿಯನ್ನು ಶಮನಗೊಳಿಸುತ್ತದೆ.

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಉರಿಯೂತವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವು ಹೆಚ್ಚು ಕ್ಯಾಲೊರಿಗಳನ್ನು ಹೊಂದಿದ್ದರಿಂದ ಮಧುಮೇಹಿಗಳು ಹಾಗೂ ಕಡಿಮೆ ಕ್ಯಾಲೋರಿ ಇರುವಂತಹ ಆಹಾರ ಸೇವಿಸುವವರು ಇದನ್ನು ಸೇವಿಸುವುದು ಸೂಕ್ತವಲ್ಲ.

ನಿಂಬೆ ನೀರಿನ ಪ್ರಯೋಜನಗಳು

ನಿಂಬೆ ನೀರಿನಲ್ಲಿ ವಿಟಮಿನ್ C, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ಕಿಡ್ನಿಯಲ್ಲಿನ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಜೀರ್ಣಕಾರಿ ಎಂಜೈಮ್‌ಗಳನ್ನು ಉತ್ತೇಜಿಸಿ, ದೇಹದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ.

ನಿಂಬೆ ರಸದಲ್ಲಿರುವ ಕಡಿಮೆ ಕ್ಯಾಲೊರಿ ಅಂಶವು ತೂಕ ಇಳಿಕೆಗೆ ಸಹಾಯಕವಾಗಿದೆ. ಆದರೆ, ನಿಂಬೆಯ ಆಮ್ಲೀಯತೆಯಿಂದ ಹಲ್ಲಿನ ದಂತ ಕವಚಕ್ಕೆ ಹಾನಿಯಾಗಬಹುದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ನಿಂಬೆ ನೀರನ್ನು ಸೇವಿಸುವುದರಿಂದ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.

ಎರಡೂ ಪಾನೀಯಗಳಿಂದಾಗುವ ಉಪಯೋಗ

* ಜೇನುತುಪ್ಪದ ನೀರು ಶಕ್ತಿಯನ್ನು ಒದಗಿಸುವುದರ ಜೊತೆಗೆ ಗಂಟಲಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇನ್ನು ನಿಂಬೆ ನೀರು ತೂಕ ಇಳಿಕೆ, ಜೀರ್ಣಕ್ರಿಯೆ ಮತ್ತು ವಿಟಮಿನ್ C ಒದಗಿಸುತ್ತದೆ.

* ಮಧುಮೇಹಿಗಳು ಅಥವಾ ಕಡಿಮೆ ಕ್ಯಾಲೋರಿ ಆಹಾರ ಸೇವಿಸುವಂತವರಿಗೆ ನಿಂಬೆ ನೀರು ಸೂಕ್ತವಾಗಿದೆ. ಆದರೆ, ಜೇನುತುಪ್ಪದ ನೀರು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಹೊಂದಿರುವವರು ಸೇವಿಸಿದರೆ ಒಳ್ಳೆಯದು.

* ಎರಡೂ ಪಾನೀಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಆದರೆ ನಿಂಬೆ ನೀರು ಕಡಿಮೆ ವೆಚ್ಚದಾಯಕ ಮತ್ತು ಸುಲಭವಾಗಿ ಲಭ್ಯವಿರುವ ಆಯ್ಕೆಯಾಗಿದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net