ಮಧುರೈ ಸಮ್ಮೇಳನದಲ್ಲಿ ಬೌನ್ಸರ್ ಗಳಿಂದ ಹಲ್ಲೆ; ನಟ ವಿಜಯ್ ವಿರುದ್ಧ ದೂರು ದಾಖಲಿಸಿದ ಅಭಿಮಾನಿ ! | Vijay

Untitled design - 2025-08-27T112958.721
Published on

Vijay : ಮಧುರೈನಲ್ಲಿ ಆಗಸ್ಟ್​ 21 ರಂದು ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ)  ಕಾರ್ಯಕ್ರಮವೊಂದರಲ್ಲಿ ವಿಜಯ್​ ಅವರ ಭದ್ರತಾ ಸಿಬ್ಬಂದಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಯಕರ್ತ ಶರತ್​ಕುಮಾರ್​ ಅವರು ತಮಿಳುನಾಡಿನ ಕುನ್ನಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶರತ್​ ನೀಡಿದ ದೂರು ಏನು?

ಪೊಲೀಸರ ಪ್ರಕಾರ, ಕಾರ್ಯಕರ್ತ ರ‍್ಯಾಂಪ್ ಏರಲು ಪ್ರಯತ್ನಿಸಿದ್ದು, ಆ ವೇಳೆ ವಿಜಯ್​ ಅವರ ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ತಳ್ಳಿದ ಕಾರಣ ಮೇಲಿನಿಂದ ಬಿದ್ದು, ಎದೆಗೆ ಬಲವಾದ ಗಾಯವಾಗಿದೆ ಎಂದು ಶರತ್​​ಕುಮಾರ್​ ದೂರು ಸಲ್ಲಿಸಿದ್ದಾರೆ ದೂರು ನೀಡಿದ್ದಾರೆ.

ನಟ ವಿಜಯ್​ ವಿರುದ್ಧ ಎಫ್​ಐಆರ್​ ದಾಖಲು

ಕಾರ್ಯಕರ್ತ ಶರತ್​ಕುಮಾರ್​ ದೂರಿನ ಮೇರೆಗೆ ಆಗಸ್ಟ್​ 26 ರಂದು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್​ ಅವರ ಭದ್ರತಾ ಸಿಬ್ಬಂದಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಮೂರು ವಿಭಾಗಗಳ ಅಡಿಯಲ್ಲಿ ಕುನ್ನಂ ಪೊಲೀಸರು ಎಫ್​ಐಆರ್​  ದಾಖಲಿಸಿದ್ದಾರೆ.

1.5 ಲಕ್ಷಕ್ಕೂ ಹೆಚ್ಚು ಆಸನ ಹೊಂದಿದ ಈ ಸಭೆಯಲ್ಲಿ ವಿಜಯ್​ನನ್ನು ಕಾಣಲು ಬೆಳಿಗ್ಗೆಯಿಂದಲೇ ಜನಸಮೂಹ ಸೇರಿತ್ತು. ಈ ವೇಳೆ ಸಾವಿರಾರು ಜನರಿಂದ ಹರ್ಷೊದ್ಗಾರ ಸ್ವೀಕರಿಸಿದ ವಿಜಯ್​, ಟಿವಿಕೆ ರಾಜಕೀಯ ಆಟವಲ್ಲ. ಇದು ಒಂದು ಸಿದ್ದಾಂತ. ಪ್ರಚಾರಕ್ಕಾಗಿ ಮಾಡುವ ಭಾಷಣವಲ್ಲ . ಟಿವಿಕೆ ಪ್ರಾಬಲ್ಯ ಸಾಧಿಸಲು ಕೋಟ್ಯಾಂತರ ಜನ ನಮ್ಮೊಂದಿಗೆ ಇದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಪುಸ್ತಕ ನೀಡಿದ ಅಭಿಮಾನಿ

ವಿಜಯ್​ನನ್ನು ಗಮನ ಸೆಳೆಯಲು ಅಭಿಮಾನಿಯೊಬ್ಬ ಅಪಾಯಕಾರಿ ಕಂಬಿಗೆ ನೇತಾಡುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿದೆ. ಈತ ವಿಜಯ್​ ಜನಸಂದಣಿಯ ಮೂಲಕ ಚಲಿಸುತ್ತಿರುವಾಗ ಪುಸ್ತಕ ನೀಡಲು ಕಂಬಿಯಲ್ಲಿ ನೇತಾಡುತ್ತಿದ್ದ, ಈ ವೇಳೆ ವಿಜಯ್​ ಸುರಕ್ಷಿತವಾಗಿ ಆತನಿಂದ ಪುಸ್ತಕ ಸ್ವೀಕರಿಸಿ ಮುಂದಕ್ಕೆ ಚಲಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net