Sharda Sinha: ಹೆಸರಾಂತ ಜಾನಪದ ಗಾಯಕಿ ( Folk Singer ) ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಶಾರದಾ ಸಿನ್ಹಾ ಅವರು ಬ್ಲೆಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ನ.5 ರಂದು ದೆಹಲಿಯ ಏಮ್ಸ್ನಲ್ಲಿ ಕೊನೆಯುಸಿರೆಳೆದರು.
72 ವಯಸ್ಸಿನ ಖ್ಯಾತ ಗಾಯಕಿಯನ್ನು ಅನಾರೋಗ್ಯದ ಹಿನ್ನೆಲೆ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅ.25 ರಿಂದ ಆಸ್ಪತ್ರೆಯ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಾರದಾ ಅವರು ನಿಧನರಾದರು ಎಂದು ಅವರ ಪುತ್ರ ಅಂಶುಮಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರದಾ ಅವರ ನಿಧನಕ್ಕೆ ಇಡೀ ಚಿತ್ರರಂಗ ಸೇರಿದಂತೆ ನರೇಂದ್ರ ಮೋದಿ ಹಾಗೂ ಹಲವಾರು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ದೇಶ್ಯಾದ್ಯಂತ ಬಿಹಾರದ ಕೋಗಿಲೆ ಎಂದೇ ಪ್ರಸಿದ್ಧಿಯಾಗಿದ್ದ ಇವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಇತ್ತಿಚೇಗೆ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸಿನ್ಹಾ ಅವರು ಇಡೀ ಬಿಹಾರದ ಜಾನಪದ ಲೋಕಕ್ಕೆ ರಾಯಭಾರಿಯಾಗಿದ್ದು, 1970 ರ ದಶಕದಿಂದಲೂ ಸಂಗೀತ ಕ್ಷೇತ್ರಕ್ಕೆ ಹೆಸರಾದ ಚೇತನ, ಭೋಜ್ಪೂರಿ, ಮೈಥಿಲಿ ಮತ್ತು ಹಿಂದಿ ಜಾನಪದ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಸಿನ್ಹಾ ಅವರು ಸಲ್ಮಾನ್ ಖಾನ್ ಅವರ ಎರಡು ಕ್ಲಾಸಿಕ್ ಸಿನಿಮಾಗಳಲ್ಲಿ ಮೈನೆ ಪ್ಯಾರ್ ಕಿಯಾ ಮತ್ತು ಹಮ್ ಆಪ್ ಕೇ ಕೌನ್ ಹಾಡು ಹಾಡಿದ್ದು, ಈ ಹಾಡು ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದೆ. ಕಹೆ ತೋ ಸೆ ಸಜ್ನಾ ಇದು ಸಿನ್ಹಾ ಅವರ ಚೊಚ್ಚಲ ಹಾಡು. ಶಾರದಾ ಅವರ ಕಲಾ ಸೇವೆಯನ್ನು ಗುರುತಿಸಿ ಹಲವು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸೇರಿದಂತೆ 2018 ರಲ್ಲಿ ಕೇಂದ್ರ ಸರ್ಕಾರ ಪಧ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾದಾಮಿ ಮಾತ್ರವಲ್ಲ ಬಾದಾಮಿ ಎಣ್ಣೆಯಲ್ಲೂ ಇದೆ ಅದ್ಭುತ ಪ್ರಯೋಜನಗಳು..Beauty Tips