

ನೀವು ಹೆದರಬೇಕಿಲ್ಲ. ಇಂಡಿಯನ್ ಸೆಕ್ಷನ್ ಆಕ್ಟ್ 1925ರ ಕಲಂ 75ರ ಪ್ರಕಾರ ವಿಲ್ ಪತ್ರದ ಆಬ್ಜೆಕ್ಟ್ ಮತ್ತು ಸಬ್ಜೆಕ್ಟ್ ಬಗ್ಗೆ ವಿಚಾರಣೆ ಮಾಡಬಹುದು ಎಂದಿದೆ. ವಿಲ್ ಯಾರಿಗೆ ಮಾಡಿದ್ದಾರೆ, ಯಾವ ವಸ್ತು/ಆಸ್ತಿಯನ್ನು ವಿಲ್ ಮಾಡಲಾಗಿದೆ ಎನ್ನುವುದರ ಬಗ್ಗೆ ನೀವು ಸಾಕ್ಷಿ ಕೊಡಬಹುದು. ನಿಮ್ಮ ತಂದೆಗೆ ಬೇರೆ ಆಸ್ತಿ ಇಲ್ಲದೇ ಇರುವುದರಿಂದ, ಚಕ್ಕುಬಂದಿ ಮನೆಯ ನಂಬರು ಎಲ್ಲಾ ಸರಿ ಇರುವುದರಿಂದ ನಿಮಗೆ ಯಾವ ಹೆದರಿಕೆಯೂ ಇಲ್ಲ. ವಿಲ್ ಮೋಸದಿಂದ ಮಾಡಿಸಿಕೊಳ್ಳದೇ ಇದ್ದರೆ, ನಿಮ್ಮ ತಂದೆ ತನ್ನ ಸ್ವ ಇಚ್ಛೆಯಿಂದ ವಿಲ್ ಮಾಡಿದ್ದರೆ ನೀವು ಹೆದರಬೇಕಾಗಿಲ್ಲ.
ಹಿಂದೂ ವಿವಾಹ ಕಾಯ್ದೆಯ ಕಲಂ 14ರ ಪ್ರಕಾರ ವಿವಾಹವಾದ ಒಂದು ವರ್ಷದ ಒಳಗೆ ವಿಚ್ಛೇದನದ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಆದರೆ ವಿಪರೀತವಾದ ಕಷ್ಟಕರ ಸನ್ನಿವೇಶಗಳನ್ನು ವಿವರಿಸಿ, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಬಹುದು. ನಿಮ್ಮ ಪ್ರಕರಣ ಅಂತಹ ಸನ್ನಿವೇಶಗಳ ವ್ಯಾಪ್ತಿಯ ಒಳಗೆ ಬರುತ್ತದೆಯೇ ಎಂದು ಕಂಡುಕೊಂಡು ಆ ನಂತರ ಪ್ರಕರನ ದಾಖಲಿಸಿ. ಇಲ್ಲದಿದ್ದರೆ ಮೊದಲಿಗೆ ನಿಮ್ಮ ತಾಲೂಕಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಪ್ರಯತ್ನಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)