ಆಟೋ ಪಡೆಯಲು ಸರತಿ ಸಾಲಿನಲ್ಲಿ ನಿಂತ ಜನರು!; ನಿಮ್ಮ ತಾಳ್ಮೆಗೆ ಸೆಲ್ಯೂಟ್​ ಎಂದ ನೆಟ್ಟಿಗರು

mumbai
Published on

ಮುಂಬೈ: ಆಟೋ ಪಡೆಯಲು ಬಹಳ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತ ಮುಂಬೈ ಜನರ ದೃಶ್ಯಾವಳಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗಿದೆ.

ಈ ಒಂದು ವಿಡಿಯೋ ಟ್ವಿಟರ್​ನಲ್ಲಿ (Twitter) ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರು ದೃಶ್ಯಾವಳಿಯ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಶೀರ್ಷಿಕೆ ನೀಡಿ ಶೇರ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಜನರು ತಮ್ಮ ಕೆಲಸ ಮುಗಿಸಿ ಮನೆಗೆ ಹೊರಡುವ ವೇಳೆ ಬಸ್​​, ಮೆಟ್ರೋ, ರೈಲು ಅಥವಾ ತಮ್ಮದೇ ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ ಸದಾ ಆತುರದಲ್ಲಿ ಇರುವುದು ನಮಗೆಲ್ಲಾ ತಿಳಿದಿರುವ ವಿಚಾರ! ಆದ್ರೆ, ಮುಂಬೈ ನಗರ ಜನರು ಆಟೋ ಸೇವೆ ಪಡೆಯಲು ಬಹಳ ಸಂಯಮತೆಯಿಂದ ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಸಿರುವುದು ಇದೀಗ ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.

ಸದ್ಯ ಈ ವೀಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅನಿಸಿಕೆಯನ್ನು ಈ ರೀತಿ ಹಂಚಿಕೊಂಡಿದ್ದಾರೆ. ಮಿಂಚಿನಂತೆ ಓಡುವ ಜಗತ್ತಿನಲ್ಲಿ ಇಷ್ಟು ತಾಳ್ಮೆಯಿಂದ ನಿಂತಿರುವ ಮುಂಬೈ ಜನತೆಗೆ ನಿಜಕ್ಕೂ ಸಲಾಂ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಮುಂಬೈ ಜನತೆಯ ಸ್ಪಿರಿಟ್​ ಎಂದು ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net