ಬಂಟಕಲ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

lecture
ಬಂಟಕಲ್ ಕಾಲೇಜಿನಲ್ಲಿ ಸಾಮಾಜಿಕ ಆವಿಷ್ಕಾರದ ಕುರಿತು ಉಪನ್ಯಾಸ ಇತ್ತಿಚೇಗೆ ನಡೆಯಿತು
Published on

ಶಿರ್ವ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗ ವತಿಯಿಂದ ಕಾಮೆಡ್ ಕೋರ್ಸ್ ಇನ್ನೋವೇಶನ್ ಹಬ್‌ನ ಸಹಯೋಗದೊಂದಿಗೆ ಇತ್ತೀಚೆಗೆ ಸಾಮಾಜಿಕ ಆವಿಷ್ಕಾರಗಳು ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಉದ್ಯಮಿ, ಎಲ್‌ಎಲ್‌ಪಿಯ ಸಹ ಸ್ಥಾಪಕ ಪ್ರೀತಮ್ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ನಾವಿನ್ಯತೆಯ ಅಗತ್ಯತೆ ಮನವರಿಕೆ ಮಾಡಿದರು, ಸಮಸ್ಯೆ ಎದುರಾದಾಗಲೆಲ್ಲ ಅದನ್ನು ಪರಿಹರಿಸುವ ಮಾರ್ಗ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ವಿವಿಧ ಅವಕಾಶ ಬಳಸಿಕೊಂಡು ಉತ್ತಮ ವೃತ್ತಿ ಆಯ್ಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಗಣಕಯಂತ್ರ ವಿಭಾಗದ ಸಹ ಪ್ರಾಧ್ಯಾಪಕಿ ರೇಶ್ಮಾ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net