

ವಿಜಯವಾಣಿ ಸುದ್ದಿಜಾಲ ಬೈಂದೂರು
ಜನೋಪಯೋಗಿ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ಅದರಿಂದ ಯಾರಿಗೆ ಉಪಯೋಗವಾಗುತ್ತದೆ ಎಂಬುದು ಮುಖ್ಯ. ಕೈಗೊಳ್ಳುವ ಯೋಜನೆಗಳ ಫಲ ಎಲ್ಲರಿಗೂ ತಲುಪಿದಾಗಲೇ ಅದರಲ್ಲೊಂದು ಸಾರ್ಥಕ ಭಾವ ಮೂಡುತ್ತದೆ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು ಹೇಳಿದರು.
ಶಿರೂರು ಕರಾವಳಿ ಕುಟುಂಬವೊದಕ್ಕೆ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಟರಿ ಶಾಶ್ವತ ಯೋಜನೆಯಾಗಿ ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ ಎಂದರು. ರೋಟರಿ ಜಿಲ್ಲೆ 3182 ಜೋನ್ 1ರ ಸಹಾಯಕ ಗವರ್ನರ್ ಡಾ.ಸಂದೀಪ್ ಶೆಟ್ಟಿ ನೂತನ ಗೃಹವನ್ನು ಉದ್ಘಾಟಿಸಿದರು. ರೋಟರಿ ವಲಯ ಸೇನಾನಿ ರಂಜಿತ್ ಕುಮಾರ್ ಶೆಟ್ಟಿ, ಬೈಂದೂರು ರೋಟರಿ ಸದಸ್ಯರಾದ ಐ.ನಾರಾಯಣ, ಹರೀಶ್ ಶೇಟ್, ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ.ಉಪ್ಪುಂದ, 2024-25ನೇ ಸಾಲಿನ ನಿಯೋಜಿತ ಅಧ್ಯಕ್ಷ ಮೋಹನ ರೇವಣ್ಕರ್, ನಿಯೋಜಿತ ಕಾರ್ಯದರ್ಶಿ ಸುನೀಲ್ ಎಚ್.ಜಿ. ಹಾಗೂ ಫಲಾನುಭವಿ ಕುಟುಂಬ ಸದಸ್ಯರು ಇದ್ದರು.