More

    ರಾಜ್ಯ ಸರ್ಕಾರಿ ನೌಕರರಿಗೆ ಇನ್ನು ಮುಂದೆ ನಾಲ್ಕನೇ ಶನಿವಾರವೂ ರಜೆ: ಇಲ್ಲೂ ಟ್ವಿಸ್ಟ್​ ಕೊಟ್ಟ ಸರ್ಕಾರ!

    ಬೆಂಗಳೂರು: ರಾಜ್ಯ ಸರ್ಕಾರದ ಸರ್ಕಾರಿ ನೌಕರರ ಸಾಂದರ್ಭಿಕ ರಜೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ. ಇಷ್ಟು ವರ್ಷ 15 ದಿಗಳ ಕಾಲ ಸಾಂದರ್ಭಿಕ ರಜೆ ನೀಡಲಾಗುತ್ತಿದ್ದು, ಇದೀಗ ಅದನ್ನು 10 ದಿನಗಳಿಗೆ ಇಳಿಸಲಾಗಿದೆ. ಹಾಗೂ ನಾಲ್ಕನೇ ಶನಿವಾರದಂದು ಸಾರ್ವತ್ರಿಕ ರಜೆ ನೀಡುವುದಾಗಿ ಘೋಷಿಸಲಾಗಿದೆ.

    ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ. ಅದರ ಜತೆಯಲ್ಲಿ ಈವರೆಗಿದ್ದ 15 ದಿನಗಳ ಸಾಂದರ್ಭಿಕ ರಜೆಯನ್ನು 10 ದಿನಗಳಿಗೆ ಇಳಿಸಿದೆ. ಶಿಕ್ಷಣ, ಆರೋಗ್ಯ ಮತ್ತು ಕೆಲ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಈ ವೃಂದದ ನೌಕರರಿಗೆ ಈ ಹಿಂದಿನಂತೆಯೇ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆಯನ್ನು ಮುಂದುವರೆಸಲಾಗುವುದು.

    ನಾಲ್ಕನೇ ಶನಿವಾರದ ಸಾರ್ವತ್ರಿಕ ರಜೆ ಅನ್ವಯವಾಗದಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವೇ ವಾರ್ಷಿಕ 15 ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಲಾಗುವುದು. ಉಳಿದೆಲ್ಲ ನೌಕರರಿಗೆ ಕೇವಲ 10 ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಲಾಗುವುದು. ನಾಲ್ಕನೇ ಶನಿವಾರ ಸಾರ್ವತ್ರಿಕ ರಜಾ ಸೌಲಭ್ಯವನ್ನು ಪಡೆಯುತ್ತಿರುವ ನೌಕರರು ಕೆಲವೊಮ್ಮೆ ವಿಶೇಷ ಪ್ರಕರಣಗಳಲ್ಲಿ ನಾಲ್ಕನೇ ಶನಿವಾರದಂದೂ ಸಹ ಕೆಲಸ ನಿರ್ವಹಿಸಿದಲ್ಲಿ ಅಂತಹ ನೌಕರರಿಗೆ ಈ ಆದೇಶ ಅನ್ವಯವಾಗುವುದಿಲ್ಲ.

    ರಾಜ್ಯ ಸರ್ಕಾರಿ ನೌಕರರಿಗೆ ಇನ್ನು ಮುಂದೆ ನಾಲ್ಕನೇ ಶನಿವಾರವೂ ರಜೆ: ಇಲ್ಲೂ ಟ್ವಿಸ್ಟ್​ ಕೊಟ್ಟ ಸರ್ಕಾರ!

    ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳನ್ನು ಹೊರಹಾಕಿದ ಖಾಸಗಿ ಶಾಲೆ ಆಡಳಿತ ಮಂಡಳಿ

    ಒತ್ತುವರಿ ಮಾಡಿದ್ದಾರೆಂದು ರೈತನ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟ ಕಾಫಿ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts