ಶಿರ್ವ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಸಮಾಜಸೇವೆಯ ಗುಣಗಳನ್ನು ಬೆಳೆಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆಗಳಿಂದ ಆಗುತ್ತದೆ. ವಿದ್ಯಾರ್ಥಿಗಳ ಜೀವನಕ್ಕೆ ಒಂದು ಉತ್ತಮ ಮೌಲ್ಯ ನೀಡುವ ಕೆಲಸ ಶಿಬಿರಗಳಿಂದ ಆಗುತ್ತದೆ ಎಂದು ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಂಜ ಶ್ರೀಧರ ತಂತ್ರಿ ಹೇಳಿದರು.
ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿರ್ವ ಹಿಂದು ಪ.ಪೂ. ಕಾಲೇಜಿನ 2024-25ನೇ ಸಾಲಿನ ಎನ್ನೆಸ್ಸೆಸ್ಸ್ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ.ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಗ್ರಾ.ಪಂ ಅಧ್ಯಕ್ಷ ಜನಾರ್ದನ ಆಚಾರ್ಯ, ಶರ್ಮಿಳಾ, ರಾಜ್‌ಗೋಪಾಲ್, ಡಾ.ಸಹನಾ ಹೆಗ್ಡೆ, ಶಕಿಲಾ, ಪ್ರಥಮ್, ಸಾಕ್ಷಿ ಬೋಧಕ-ಬೋಧಕೇತರ ವೃಂದ ಉಪಸ್ಥಿತರಿದ್ದರು. ಭಾಸ್ಕರ ಎ. ಸ್ವಾಗತಿಸಿದರು. ಸುಂದರ ಮೇರಾ ವಂದಿಸಿದರು. ಮಂಗಳಾ ಕಾರ್ಯಕ್ರಮ ನಿರೂಪಿಸಿದರು.