More

    ಸಲ್ಮಾನ್‌ಗೆ ಮತ್ತೊಮ್ಮೆ ಬೆದರಿಕೆ!; ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್‌ನಿಂದ ಗಿಪ್ಪಿ ಮನೆ ಮೇಲೆ ದಾಳಿ

    ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್, ಸದ್ಯ ತಿಹಾರ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೊಯ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ.

    ಪಂಜಾಬಿ ನಟ, ಗಾಯಕ ಗಿಪ್ಪಿ ಗ್ರೇವಾಲ್ ಅವರ ಕೆನಡಾದ ನಿವಾಸದ ಮೇಲೆ ಇತ್ತೀಚೆಗಷ್ಟೆ ಗುಂಡಿನ ದಾಳಿಯಾಗಿತ್ತು. ಕೆಲ ದಿನಗಳ ಹಿಂದಷ್ಟೇ ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರರ ಸಾಲು ಸಾಲು ಹತ್ಯೆ ಸಂಬಂಧ ಕೆನಡಾದ ಟ್ರುಡೋ ಸರ್ಕಾರ ಭಾರತದ ಮೇಲೆ ಆರೋಪ ಹೊರಿಸಿತ್ತು. ಕ್ರಮೇಣ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಗಿಪ್ಪಿ ನಿವಾಸದ ಮೇಲಿನ ಗುಂಡಿನ ದಾಳಿ ಸಾಕಷ್ಟು ಚರ್ಚೆಗೀಡಾಗಿತ್ತು. ಅದರ ಬೆನ್ನಲ್ಲೇ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ ಈ ದಾಳಿಯ ಜವಾಬ್ದಾರಿ ಹೊತ್ತಿದೆ.

    ಬಿಷ್ಣೊಯ್ ತಂಡದ ಸದಸ್ಯನ ೇಸ್‌ಬುಕ್ ಖಾತೆಯಲ್ಲಿ, ‘ಸಲ್ಮಾನ್ ಖಾನ್‌ನ ಅಣ್ಣ ಎಂದು ಹೇಳುತ್ತೀರಿ. ನಿನ್ನನ್ನು ಕಾಪಾಡಲು ಅವನು ಬರುತ್ತಾನಾ ನೋಡೋಣ. ಈ ಸಂದೇಶ ಸಲ್ಮಾನ್ ಖಾನ್‌ಗೆ ನೀಡುತ್ತಿರುವುದು. ಇದನ್ನು ಟ್ರೇಲರ್ ಅಂದುಕೊಳ್ಳಿ, ಪೂರ್ತಿ ಸಿನಿಮಾ ಇನ್ನೂ ಬಾಕಿಯಿದೆ. ಯಾವ ದೇಶಕ್ಕೆ ಹಾರಿದರೂ ಪರವಾಗಿಲ್ಲ, ಸಾವು ಹಿಂಬಾಲಿಸುತ್ತದೆ. ನೆನಪಿರಲಿ, ಸಾವಿಗೆ ವೀಸಾ ಬೇಕಾಗಿಲ್ಲ’ ಎಂದು ಬರೆದಿದ್ದ ಪೋಸ್ಟ್ ಕೂಡ ವೈರಲ್ ಆಗಿದೆ.

    ಇದಕ್ಕೆ ಗಿಪ್ಪಿ ಗ್ರೇವಾಲ್, ‘ನಾನು ನಟಿಸಿದ್ದ ‘ಮೌಜಾ ಹಿ ಮೌಜಾ ಸಿನಿಮಾದ ನಿರ್ಮಾಪಕರು ಕಾರ್ಯಕ್ರಮವೊಂದಕ್ಕೆ ಸಲ್ಮಾನ್ ಖಾನ್ ಆಮಂತ್ರಿಸಿದ್ದರು. ಅದಕ್ಕೂ ಮುನ್ನ ಬಿಗ್‌ಬಾಸ್‌ನಲ್ಲಿ ಭೇಟಿಯಾಗಿದ್ದೆ. ಅದು ಬಿಟ್ಟರೆ, ಸಲ್ಮಾನ್ ಜತೆ ನನಗೆ ಸ್ನೇಹವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts