More

    ಚೀನಾದಿಂದ ಅತಿವೇಗದ ಇಂಟರ್​ನೆಟ್​ ಬಿಡುಗಡೆ

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಚೀನಾ ಮೂಲದ ಕಂಪನಿಗಳು “ವಿಶ್ವದ ಅತ್ಯಂತ ವೇಗದ ಇಂಟರ್​ನೆಟ್​’ ನೆಟ್​ವರ್ಕ್​ ಬಿಡುಗಡೆ ಮಾಡಿದ್ದು, ಇದರಿಂದ ಪ್ರತಿ ಸೆಕೆಂಡಿಗೆ 1.2 ಟೆರಾಬೈಟ್​ಗಳಲ್ಲಿ ಡೇಟಾವನ್ನು ರವಾನಿಸಬಹುದು ಎಂದು ತಿಳಿಸಲಾಗಿದೆ.

    ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್​ ಮಾಧ್ಯಮದ ಪ್ರಕಾರ, ಈ ವೇಗದ ಪ್ರಮಾಣ ಪ್ರಸ್ತುತ ಪ್ರಮುಖ ಇಂಟರ್​ನೆಟ್​ ಸೇವೆಗಳಿಗಿಂತ ಹತ್ತು ಪಟ್ಟು ಹೆಚ್ಚು ಎನ್ನಲಾಗಿದೆ. ಸಿಂಗುವಾ ವಿಶ್ವವಿದ್ಯಾಲಯ, ಚೀನಾ ಮೊಬೈಲ್​, ಹುವಾಯಿ ಟೆಕ್ನಾಲಜೀಸ್​ ಮತ್ತು ಸೆರ್ನೆಟ್​ ಕಾರ್ಪೊರೇಷನ್​ ನಡುವಿನ ಸಹಯೋಗದೊಂದಿಗೆ ಈ ತಂತ್ರಜ್ಞಾನ ರೂಪಿಸಲಾಗಿದೆ.

    3,000 ಕಿಲೋಮೀಟರ್​ಗಳಷ್ಟು ವ್ಯಾಪಿಸಿರುವ ಈ ನೆಟ್​ವರ್ಕ್​, ಬೀಜಿಂಗ್​, ವುಹಾನ್​ ಮತ್ತು ಗ್ವಾಂಗ್ಝೂವನ್ನು ವಿಸ್ತಾರವಾದ ಆಪ್ಟಿಕಲ್​ ಫೈಬರ್​ ಕೇಬಲ್​ ವ್ಯವಸ್ಥೆಯ ಮೂಲಕ ಸಂಪರ್ಕಿಸುತ್ತದೆ. ಅಲ್ಲದೆ, ಪ್ರತಿ ಸೆಕೆಂಡಿಗೆ 1.2 ಟೆರಾಬೈಟ್​ಗಳಲ್ಲಿ (1,200 ಗಿಗಾಬಿಟ್​ಗಳು) ಡೇಟಾವನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ. ಪ್ರಪಂಚದ ಹೆಚ್ಚಿನ ಇಂಟರ್​ನೆಟ್​ ಬ್ಯಾಕ್​ಬೋನ್​ ನೆಟ್​ವರ್ಕ್​ಗಳು ಪ್ರತಿ ಸೆಕೆಂಡಿಗೆ ಕೇವಲ 100 ಗಿಗಾಬೈಟ್​ಗಳಲ್ಲಿ ಕಾರ್ಯನಿರ್ವಹಿಸುತ್ತವೆ.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts