More

    ಹಾಗಾದ್ರೆ ಈ ಟಾಲಿವುಡ್​ ನಟನಿಗೆ ಪ್ರಶಾಂತ್​ ನೀಲ್ ಆ್ಯಕ್ಷನ್​- ಕಟ್ ಹೇಳೋದು ಪಕ್ಕಾನಾ?

    ‘ಕೆಜಿಎಫ್​’ ನಿರ್ದೇಶಕ ಪ್ರಶಾಂತ್​ ನೀಲ್​ ಕುರಿತ ಸುದ್ದಿಗಳು ಟಾಲಿವುಡ್​ ಅಂಗಳದಲ್ಲಿಯೂ ಆಗಾಗ ಸದ್ದು ಮಾಡುತ್ತಿರುತ್ತವೆ. ಅವರೊಂದಿಗೆ ಹಲವು ಸ್ಟಾರ್ ನಾಯಕರ ಹೆಸರುಗಳು ತಳುಕು ಹಾಕಿಕೊಂಡು ದೊಡ್ಡ ಮಟ್ಟದ ಕಾತರಕ್ಕೆ ಕಾರಣವಾಗಿರುತ್ತವೆ. ಇದೀಗ ಅಂಥದ್ದೇ ಸುದ್ದಿಯೊಂದು ಟಾಲಿವುಡ್​ ಅಂಗಳದಿಂದ ಕೇಳಿಬಂದಿದೆ. ತೆಲುಗಿನ ಸ್ಟಾರ್ ನಟ ಜೂ. ಎನ್​ಟಿಆರ್ ಚಿತ್ರಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಎಂಬ ಸುದ್ದಿ ಅಧಿಕೃತ ಎನ್ನಲಾಗುತ್ತಿದೆ.

    ಹಾಗಾದ್ರೆ ಈ ಟಾಲಿವುಡ್​ ನಟನಿಗೆ ಪ್ರಶಾಂತ್​ ನೀಲ್ ಆ್ಯಕ್ಷನ್​- ಕಟ್ ಹೇಳೋದು ಪಕ್ಕಾನಾ?

    ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಮಾಡಿದ್ರೆ, ನೀವೂ ಮಾಡ್ಬೇಕು ಅಂತ ರೂಲ್ಸ್ ಇದೆಯಾ?

    ಈ ಹಿಂದೆಯೇ ಮಹೇಶ್​ ಬಾಬು ಅವರ ಚಿತ್ರವನ್ನೂ ನಿರ್ದೇಶನ ಮಾಡುವಂತೆ ಪ್ರಶಾಂತ್​ಗೆ ಆಫರ್​ಗಳು ಬಂದಿದ್ದವು. ಆಗ ಕೆಜಿಎಫ್​ ಸಿನಿಮಾ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದರು. ಬಳಿಕ ಎನ್​ಟಿಆರ್ ಜತೆಗೂ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇಬ್ಬರು ಸ್ಟಾರ್​ಗಳ ಪೈಕಿ ಎನ್​ಟಿಆರ್​ ಜತೆ ಸಿನಿಮಾ ಮಾಡುವುದು ಅಧಿಕೃತ ಆಗಿದೆ ಎಂದು ಟಾಲಿವುಡ್​ ಮೂಲಗಳು ಮಾತನಾಡುತ್ತಿವೆ. ಹಾಗಾದರೆ ಸಿನಿಮಾ ಯಾವಾಗ ಶುರು?

    ಇದನ್ನೂ ಓದಿ: VIDEO| ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ವರ್ಕೌಟ್​ ನೋಡಿದ್ರೆ, ನೀವು ಖಂಡಿತ ದಂಗಾಗ್ತಿರಾ!

    ಸದ್ಯ ರಾಜಮೌಳಿ ಜತೆಗೆ ಆರ್​ಆರ್​ಆರ್​ ಕೆಲಸ ಬಾಕಿ ಉಳಿಸಿಕೊಂಡಿರುವ ಎನ್​ಟಿಆರ್​, ಆ ಸಿನಿಮಾ ಮುಗಿದ ಬಳಿಕ ಪ್ರಶಾಂತ್​ ನೀಲ್​ ಜತೆ ಕೈ ಜೋಡಿಸಲಿದ್ದಾರಂತೆ. ದೊಡ್ಡ ಬಜೆಟ್​ನಲ್ಲಿ ಮೂಡಿಬರಲಿರುವ ಈ ಚಿತ್ರ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಮೈ ತ್ರಿ ಮೂವಿ ಮೇಕರ್ಸ್​ ಮತ್ತು ಎನ್​ಟಿಆರ್ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಪಕ್ಕಾ ಆ್ಯಕ್ಷನ್​ ಸಿನಿಮಾ ಇದಾಗಿರಲಿದೆಯಂತೆ. ಮಾಸ್​ ಅವತಾರದಲ್ಲಿ ಎನ್​ಟಿಆರ್​ ಎದುರಾಗಲಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಮೇ 11ರಿಂದ ಧಾರಾವಾಹಿ ಶೂಟಿಂಗ್‌ ಪ್ರಾರಂಭ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts