ಕಡೆಗೂ ಮಹೇಶ್​ ಬಾಬು ಫ್ಯಾನ್ಸ್​ಗಳ ಬೇಡಿಕೆ ಈಡೇರಿಸಿದ 'ಗುಂಟೂರು ಕಾರಂ' ಚಿತ್ರತಂಡ

Untitled design - 2023-08-03T132216.546
Published on

ಆಂಧ್ರಪ್ರದೇಶ: ಟಾಲಿವುಡ್​​ನ ಪ್ರಿನ್ಸ್​ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ನಟನ ಅಭಿಮಾನಿಗಳು ಈ ಹಿಂದೆ ಸಿನಿಮಾ ತಯಾರಕರ ವಿರುದ್ಧ ಯಾವುದೇ ಅಪ್ಡೇಟ್​ ಅನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಗೊಂದಲಗಳಿಗೆ ಈಗ ಉತ್ತರ ಲಭಿಸಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಕಾರಂ' ಚಿತ್ರದ ಚಿತ್ರೀಕರಣವು ಈ ಹಿಂದೆ ಕೆಲ ಸಮಯ ಸ್ಥಗಿತಗೊಂಡಿತ್ತು. ಆದ್ರೆ, ಇದೀಗ ಪುನಾರಂಭಗೊಂಡಿದ್ದು, ವರದಿಗಳ ಪ್ರಕಾರ ಆಗಸ್ಟ್ 11, 2023 ರಿಂದ ಮಹೇಶ್​ ಬಾಬು ಅವರ ಬಹುಮುಖ್ಯ ದೃಶ್ಯಗಳ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಯೋಜಿಸಿದೆ. ತಮ್ಮ ಕುಟುಂಬದೊಂದಿಗೆ ಪ್ರವಾಸ ತೆರಳಿರುವ 'ಪ್ರಿನ್ಸ್'​, ಆಗಸ್ಟ್ 16, 2023 ರಂದು ಹೈದರಾಬಾದ್‌ಗೆ ಹಿಂದಿರುಗಲಿದ್ದು, ಆಗಸ್ಟ್ 20 ರಂದು ಸೆಟ್‌ಗೆ ಬರಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಚಿತ್ರತಂಡ ನೀಡಿರುವ ಮಾಹಿತಿ ಅನುಸಾರ, 2024ರ ಸಂಕ್ರಾಂತಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್​ ಮಾಡಲು ಯೋಜಿಸಿದೆ. ಮಹೇಶ್​ ಬಾಬುಗೆ ಜೋಡಿಯಾಗಿ ಈ ಹಿಂದೆ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಅವರ ಜಾಗವನ್ನು ಮೀನಾಕ್ಷಿ ಚೌಧರಿ ಬದಲಾಯಿಸಿದ್ದು, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net