ತಡರಾತ್ರಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 5 ಕೆಜಿ ಚಿನ್ನಾಭರಣ ದರೋಡೆ: ಸಿನಿಮೀಯ ರೀತಿಯಲ್ಲಿ ನುಗ್ಗಿದ ದರೋಡೆಕೋರರು

Untitled-1
Published on

ದೇವನಹಳ್ಳಿ: ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಸಿನಿಮೀಯ ರೀತಿಯಲ್ಲಿ ನುಗ್ಗಿದ ದರೋಡೆಕೋರರು ಮೂರೂವರೆ ಕೋಟಿ ಮೌಲ್ಯದ ಸುಮಾರು 5 ಕೆಜಿ ಚಿನ್ನಾಭರಣ ದೋಚಿದ್ದಾರೆ.

ಶನಿವಾರ ಬ್ಯಾಂಕ್​ಗೆ ರಜೆ ಇದ್ದ ಕಾರಣ ಭಾನುವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮುಖಕ್ಕೆ‌ ಮಂಕಿ ಕ್ಯಾಪ್ ಹಾಕಿಕೊಂಡು ತಡರಾತ್ರಿ ಬಂದ ದರೋಡೆಕೋರರು ಗ್ಯಾಸ್ ಕಟರ್ ಬಳಸಿ ಬ್ಯಾಂಕ್​ನಲ್ಲಿ ಚಿನ್ನಾಭರಣ ಮತ್ತು 14 ಲಕ್ಷ ನಗದು ದೋಚಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net