ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ: ಪಂಚಭೂತಗಳಲ್ಲಿ ಲೀನವಾದ ಹೀರಾಬೆನ್​

heeraben modi
Published on

ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ(Heeraben Modi) ಅವರ ಅಂತ್ಯಕ್ರಿಯೆ ಹಿಂದೂ ಸನಾತ ಪದ್ಧತಿಯಂತೆ ಶುಕ್ರವಾರ ಬೆಳಗ್ಗೆ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು.

​ಡಿ. 28ರಂದು ಹೀರಾಬೆನ್ ಮೋದಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅಹಮದಾಬಾದ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಡಿ​.30) ಬೆಳಗಿನಜಾವ 3.39ಕ್ಕೆ ಆಸ್ಪತ್ರೆಯಲ್ಲೇ ಹೀರಾಬೆನ್​ ಕೊನೆಯುಸಿರೆಳೆದರು. ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅತ್ಯಂತ ನೋವಿನಲ್ಲೇ ಅಹಮದಾಬಾದ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ಅಹಮದಾಬಾದ್​ನ ನಿವಾಸದಲ್ಲಿ ತಾಯಿಗೆ ಅಂತಿಮ ನಮನ ಸಲ್ಲಿಸಿದರು.

ಗಾಂಧಿನಗರದ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ತಾಯಿಯ ಅಂತಿಮ ಯಾತ್ರೆಯಲ್ಲಿ ಹೆಗಲುಕೊಟ್ಟ ಪ್ರಧಾನಿ, ಅಮ್ಮನಿಗೆ ಗೌರವ ಸಲ್ಲಿಸಿದರು. ಹಿಂದೂ ಸನಾತನ ಪದ್ಧತಿಯಂತೆ ವಿಧಿವಿಧಾನ ನೆರವೇರಿತು. ತಾಯಿಯ ಚಿತೆಗೆ ಎಲ್ಲ ಸಹೋದರರೊಂದಿಗೆ ಪ್ರಧಾನಿ ಅಗ್ನಿಸ್ಪರ್ಶ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net