More

    ಕೋರ್ಟ್​​​ ವಿಚಾರಣೆ ವೇಳೆ ನ್ಯಾಯಧೀಶೆ ಮೇಲೆ ದಾಳಿ ಮಾಡಿದ ಕೈದಿ; ವಿಡಿಯೋ ವೈರಲ್​​

    ಅಮೆರಿಕಾ:  ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ನ್ಯಾಯಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಈ ಘಟನೆ ನೆವಾಡಾ ಕೋರ್ಟ್​​  ರೂಂನಲ್ಲಿ ಬುಧವಾರ ನಡೆದಿದೆ ಎನ್ನಲಾಗಿದೆ.

    ವಿಡಿಯೋದಲ್ಲಿ ಏನಿದೆ?:ಅಪರಾಧಿ ಮೇಲೆ ಅನೇಕ ಪ್ರಕರಣಗಳಿದ್ದು, ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದಾನೆ. ಬ್ಯಾಟರಿ ದಂಧೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ ಬುಧವಾರ ಕೋರ್ಟ್​​​ ಮುಂದೆ ಹಾಜರುಪಡಿಸಿದಲಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಧೀಶರ ಟೆಬಲ್​​ ಮೇಲೆ ಹಾರಿ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಮೇಲೆ ಹಲ್ಲೆ ನಡೆಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

    ಈ ವ್ಯಕ್ತಿಯನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ಅಪರಾಧಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಮೇಲಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಬೇಕಾದರೆ ಈ ಘಟನೆ ನಡೆದಿದೆ.

    ಡಿಯೋಬ್ರಾ ರೆಡ್ಡೆನ್ ನ್ಯಾಯಧೀಶರು ಇರುವ ಟೆಬಲ್​​​​ ಮೇಲೆ ಹಾರಿದ ವೇಳೆ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರು ಕೆಳಗೆ ಬಿದ್ದು ತಲೆ ಗಾಯಗಳಾಗಿವೆ, ಇನ್ನು ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರನ್ನು ಕಾಪಾಡಲು ಬಂದ ಕೋರ್ಟ್​​​​​​ ಮಾರ್ಷಲ್​​​​ಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ್ಯಾಯಧೀಶೆ ಹಾಗೂ ಮಾರ್ಷಲ್​​ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts