5 ನಿಮಿಷ ತಡವಾಗಿದ್ದಕ್ಕೆ ತನ್ನ ಹೆಂಡತಿಗೇ ನಾಟಕಕ್ಕೆ ಸೇರಿಸಿರಲಿಲ್ಲವಂತೆ ಲಂಕೇಶ್

Lankesh 90
Published on

ಬೆಂಗಳೂರು: ಲಂಕೇಶ್ ಅವರು ತಮ್ಮ ಜೀವನದಲ್ಲಿ ‘ಸಮಯ ಪ್ರಜ್ಞೆ’ಯನ್ನು ಹೊಂದಿದ್ದರು. ಒಂದೊಮ್ಮೆ ಅವರ ರಚನೆಯ ‘ತೆರೆಗಳು’ ನಾಟಕ ಪ್ರದರ್ಶನವಿತ್ತು. ನಾನು ಮಕ್ಕಳನ್ನು ಕರೆದುಕೊಂಡು ನಾಟಕಕ್ಕೆ ಹೋಗುವಷ್ಟರಲ್ಲಿ 5 ನಿಮಿಷ ತಡವಾಗಿತ್ತು. ಅದಕ್ಕೆ ಅವರು ನನಗೇ ಪ್ರವೇಶ ಕಲ್ಪಿಸಿರಲಿಲ್ಲ. ಕೊನೆಗೆ ನಾನು ಅವರ ಪತ್ನಿ ಎಂದು ತಿಳಿದಾಗ ಬೇರೊಬ್ಬರು ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಲಂಕೇಶ್ ಪತ್ನಿ ಇಂದಿರಾ ತಮ್ಮ ನೆನಪುಗಳನ್ನು ಸ್ಮರಿಸಿದರು.

ಭಾಗವತರು ಸಾಂಸ್ಕೃತಿಕ ಸಂಘಟನೆಯು ಭಾನುವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್-90 ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಲಂಕೇಶ್ ಮತ್ತು ಮಗಳು ಗೌರಿ ಲಂಕೇಶ್‌ಯೊಂದಿಗಿನ ಹಲವು ಘಟನೆಗಳನ್ನು ಮೆಲುಕು ಹಾಕಿದ ಅವರು ಗದ್ಗದಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net