ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು: ತಲವಾರ್​ನಿಂದ ಕಡಿದು, ತಲೆಯನ್ನೇ ಜಜ್ಜಿ ಕೊಲೆ..

Murder
Published on

ಕಲಬುರಗಿ: ರಕ್ತಪಾತದ ಮೂಲಕ ಆಗಾಗ ಸುದ್ದಿಯಾಗುವ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಇಲ್ಲಿನ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ತಲೆಯನ್ನೇ ಜಜ್ಜಿ ಹಾಕಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ (ಕೆ) ಗ್ರಾಮದಲ್ಲಿ ಈ ಕೊಲೆ ನಡೆದಿದೆ.

ಇಲ್ಲಿನ ಶಿರವಾಳ ಗ್ರಾಮದ ಅಕ್ಷಯಕುಮಾರ್ ಕ್ಷತ್ರಿ (28) ಹತ್ಯೆಯಾದ ವ್ಯಕ್ತಿ. ಜಮೀನೊಂದರಲ್ಲಿ ಈ ವ್ಯಕ್ತಿಯನ್ನು ಅಟ್ಟಾಡಿಸಿದ ದುಷ್ಕರ್ಮಿಗಳನ್ನು ತಲವಾರ್​ನಿಂದ ಗಂಭೀರವಾಗಿ ಗಾಯಗೊಳಿಸಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿಹಾಕಿದ್ದು, ರುಂಡ ಪೂರ್ಣವಾಗಿ ಜಜ್ಜಿಹೋಗಿದೆ.

ಜಮೀನು ವಿಚಾರವಾಗಿ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. ಮಲ್ಲು ಬಂಡೆ, ಹಣಮಂತ ಬಂಡೆ,‌ ನೀಲಪ್ಪ ಬಂಡೆ, ನೇಮಣ್ಣ ಬಂಡೆ ಎಂಬವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net