ತಂದೆಗೆ ಕರೊನಾ ಪಾಸಿಟಿವ್, ಮಗನಿಗೆ ತಪ್ಪಿತು ಆಡುವ ಅವಕಾಶ!

lakshya sen web
Published on

ಸಾರ್‌ಬ್ರುಕೆನ್ (ಜರ್ಮನಿ): ತಂದೆ ಹಾಗೂ ಕೋಚ್ ಡಿಕೆ ಸೇನ್‌ಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಹಾಲಿ ಚಾಂಪಿಯನ್ ಲಕ್ಷ್ಯ ಸೇನ್ ಸಾರ್‌ಲೊರ್‌ಲಕ್ಸ್ ಓಪನ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ಡೆನ್ಮಾರ್ಕ್ ಓಪನ್‌ನಲ್ಲಿ ಬೇಗನೆ ಹೊರಬಿದ್ದಿದ್ದ 19 ವರ್ಷದ ಲಕ್ಷ್ಯ ಸೇನ್, ಇದೀಗ ಜರ್ಮನಿಯಲ್ಲೂ ನಿರಾಸೆ ಅನುಭವಿಸುವಂತಾಗಿದೆ. ಸೋಮವಾರ ಕಡ್ಡಾಯ ಕರೊನಾ ಪರೀಕ್ಷೆಗೆ ಒಳಗಾಗಿದ್ದೆವು. ಮಂಗಳವಾರ ಸಂಜೆಯಷ್ಟೇ ವರದಿ ಬಂದಿದೆ. ನನ್ನ ವರದಿ ಪಾಸಿಟಿವ್ ಬಂದಿದೆ. ಇದರಿಂದಾಗಿ ಲಕ್ಷ್ಯ ಸೇನ್ ಇತರ ಆಟಗಾರರ ಹಿತದೃಷ್ಟಿಯಿಂದ ಟೂರ್ನಿಯಿಂದ ಹಿಂದೆ ಸರಿಯಬೇಕಾಯಿತು ಎಂದು ಡಿಕೆ ಸೇನ್ ತಿಳಿಸಿದ್ದಾರೆ.

ಕಳೆದ ವರ್ಷ ಇಲ್ಲಿ ಪ್ರಶಸ್ತಿ ಜಯಿಸಿದ್ದ ಲಕ್ಷ್ಯ ಸೇನ್, ಬುಧವಾರ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಹೋವರ್ಡ್ ಶು ವಿರುದ್ಧ ಅಭಿಯಾನ ಆರಂಭಿಸಬೇಕಾಗಿತ್ತು. ಕಳೆದ ವರ್ಷ ಲಕ್ಷ್ಯ ಸೇನ್ 5 ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net