PHOTOS |ಮಾಲ್ಡೀವ್ಸ್‌ನಲ್ಲಿ ಸೈನಾ-ಕಶ್ಯಪ್ ದಂಪತಿ ಸುತ್ತಾಟ

saina web.
Published on

ನವದೆಹಲಿ: ಸದಾ ಕ್ರೀಡಾ ಚಟುವಟಿಕೆಯಲ್ಲಿ ಬಿಜಿಯಾಗಿರುತ್ತಿದ್ದ ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ದಂಪತಿ, ಕರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಮನೆಯಲ್ಲೇ ಬಂಧಿಯಾಗಿದ್ದರು. ಮುಂದಿನ ವರ್ಷದವರೆಗೆ ಬ್ಯಾಡ್ಮಿಂಟನ್ ಕೋರ್ಟ್‌ಗೂ ಮರಳದಿರಲು ನಿರ್ಧರಿಸಿರುವ ದಂಪತಿ ಇದೀಗ ಮಾಲ್ಡೀವ್ಸ್‌ನಲ್ಲಿ ರಜಾದಿನಗಳನ್ನು ಆನಂದಿಸುತ್ತಿದೆ.

ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಸೈನಾ ಮತ್ತು ಕಶ್ಯಪ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಸೈನಾ ಲುಕ್ ಹಾಟ್ ಆಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ಗಳನ್ನೂ ಹಾಕಿದ್ದಾರೆ.

2018ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸೈನಾ-ಕಶ್ಯಪ್ ದಂಪತಿ ಅದಕ್ಕೆ ಮುನ್ನ 10 ವರ್ಷಗಳ ಕಾಲ ಪರಸ್ಪರ ಪ್ರೀತಿ, ಡೇಟಿಂಗ್‌ನಲ್ಲಿದ್ದರು. ಆದರೆ ಇದರ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ‘ನಾನು ಹರಿಯಾಣ ಮೂಲದವಳು. ಕಶ್ಯಪ್ ಹೈದರಾಬಾದ್‌ನವರು. ನಮ್ಮ ಸಮಾಜದಲ್ಲಿ ಅಂತರ್ ಜಾತೀಯ ವಿವಾಹವನ್ನು ಈಗಲೂ ಭಿನ್ನವಾಗಿ ನೋಡಲಾಗುತ್ತದೆ. ಹೀಗಾಗಿ ನಾವು 10 ವರ್ಷಗಳ ಕಾಲ ನಮ್ಮ ಪ್ರೀತಿಯನ್ನು ಬಚ್ಚಿಡಬೇಕಾಯಿತು’ ಎಂದು ಸೈನಾ ಹಿಂದೊಮ್ಮೆ ಹೇಳಿದ್ದರು.

2012ರ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬಾರಿ ಸ್ವರ್ಣ ಪದಕ ಜಯಿಸಿದ್ದಾರೆ. ವಿಶ್ವ ರ‌್ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಿದ್ದರು. ಕಶ್ಯಪ್ ಕೂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್​ಫೈನಲ್​ ಸಾಧನೆ ಮಾಡಿದ್ದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ ಗರಿಷ್ಠ 24ನೇ ಸ್ಥಾನಕ್ಕೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net