ಗರಿಕೇಮಠದಲ್ಲಿ ಲಕ್ಷ ಲಿಂಗಾರ್ಚನೆ ವಿಧಿ ಸಂಪನ್ನ

linga
ಸಾಹೇಬರಕಟ್ಟೆ ಸಮೀಪದ ಗರಿಕೇಮಠ ಶ್ರೀ ಅರ್ಕಗಣಪತಿ ದೇವಸ್ಥಾನದಲ್ಲಿ ದೀಪೇಶ್ ಎಂ.ದೋಡಿಯಾ ಸೇವಾರ್ಥ ನಡೆದ ಲಕ್ಷ ಲಿಂಗಾರ್ಚನೆ ವಿಧಿ ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಸಾಹೇಬರಕಟ್ಟೆ ಸಮೀಪದ ಗರಿಕೇಮಠ ಶ್ರೀ ಅರ್ಕಗಣಪತಿ ದೇವಸ್ಥಾನದಲ್ಲಿ ದೀಪೇಶ್ ಎಂ.ದೋಡಿಯಾ ಸೇವಾರ್ಥ ನಡೆದ ಲಕ್ಷ ಲಿಂಗಾರ್ಚನೆ ವಿಧಿ ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ಸಂಪನ್ನಗೊಂಡಿತು. 150 ವೈದಿಕರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಐದು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಸೇವಾರ್ಥಿ ದೀಪೇಶ್ ಎಂ.ದೋಡಿಯಾ ಇಂಗ್ಲೆಂಡ್‌ನಲ್ಲಿ ಲೆಕ್ಕಪರಿಶೋಧಕರಾಗಿದ್ದು, ಆಧ್ಯಾತ್ಮ, ಪರಮಾತ್ಮದಲ್ಲಿ ಹೆಚ್ಚಿನ ಒಲವು ಹೊಂದಿದವರು. ತಮ್ಮ 8ನೇ ವರ್ಷದಲ್ಲಿ ಮೋಕ್ಷಾರ್ಥಕ್ಕಾಗಿ ಪ್ರಾರ್ಥಿಸಿದವರು. ಶ್ರೀ ಅರ್ಕಗಣಪತಿ ಅನುಗ್ರಹದಿಂದ ಲೋಕಕಲ್ಯಾಣ ಕಾರ್ಯಗಳು ನೆರವೇರಲಿ ಎಂದು ಶ್ರೀ ಅರ್ಕಗಣಪತಿ ಕ್ಷೇತ್ರ ಗರಿಕೇಮಠ ಮುಖ್ಯಸ್ಥ ರಾಮಪ್ರಸಾದ ಅಡಿಗ ಹಾರೈಸಿದರು.

ಆಚಾರ, ವಿಚಾರ, ಪಂಥ, ಪ್ರಭೇದ, ಭಾಷೆ, ಜಾತಿಗಳಲ್ಲಿ ಹಂಚಿಹೋಗಿರುವ ನಮ್ಮ ಸನಾತನ ಧರ್ಮಿಯರಲ್ಲಿ ಒಗ್ಗಟ್ಟು ಮೂಡಿ ಐಕ್ಯಮತ್ಯ, ಮೂಡಿಬರಲಿ. ಭಗವದ್ಗೀತೆಯಲ್ಲಿ ಹೇಳಿದಂತೆ ಪರಬ್ರಹ್ಮನ ಪತ್ಯೇಕ ರೂಪಗಳಲ್ಲಿ ಸನಾತನ ಧರ್ಮೀಯರಿಗೆ ಶ್ರದ್ಧೆ ಭಕ್ತಿ ಉಂಟಾಗಲಿ. ಭಾರತ ದೇಶಕ್ಕೆ ಈಗಿನ ಕಾಲದಲ್ಲಿ ಬಂದಂತಹ ಆಂತರಿಕ ಕ್ಷೋಭೆ ದೇಶಿ ಶಕ್ತಿಗಳಿಂದ ತೊಂದರೆ ಶತ್ರುಗಳ ಕಾಟ ಪರಿಹಾರವಾಗಿ ನಾಶವಾಗಲಿ. ಭಾರತ ದೇಶ ವಿಶ್ವ ಶಕ್ತಿ, ವಿಶ್ವ ನಾಯಕತ್ವ, ವಿಶ್ವಗುರುವಾಗಲೀ ಎಂಬ ಉದ್ದೇಶದಿಂದ ಈ ಲಕ್ಷ ಲಿಂಗಾರ್ಚನೆ ವಿಧಿ ನಡೆಸಲಾಗಿದೆ ಎಂದು ದೀಪೇಶ್ ಎಂ.ದೋಡಿಯಾ ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದ ವಿವರ

ಗುರುಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಗೋಪೂಜೆ, ಕೈಲಾಸ ಪ್ರಸ್ತಾರ ನಿರ್ಮಾಣ, ನ್ಯಾಸಾದಿಗಳು, ಲಕ್ಷ ಲಿಂಗಗಳ ಸ್ಥಾಪನೆ, ಶ್ರೀ ದೇವತಾ ಆವಾಹನೆ, ತ್ರಿಕಾಲ ಪೂಜೆ, ಲಘುನ್ಯಾಸ ಪೂರ್ವಕ ರುದ್ರಪಾರಾಯಣ, ಕಲ್ಪೋಕ್ತ ಪೂಜೆ, ಬಿಲ್ವಾರ್ಚನೆ, ತಿಲಾರ್ಚನೆ, ಭಸ್ಮಾರ್ಚನೆ, ಸಹಸ್ರನಾಮ ಪೂಜೆ, ಸಂಜೆ ಶ್ರಾವಣ ಮಾಸದ ಶನಿ ಪ್ರದೋಷ ಪೂಜೆ, ರುದ್ರತ್ರಿಶತೀ ಅರ್ಚನೆ, ಮಂಗಳಾರತಿ, ಭಾನುವಾರ ಬೆಳಗ್ಗೆ ಲಕ್ಷ ಲಿಂಗಾರ್ಚನೆ, ಆವರಣಾರ್ಚನೆ, ಮಹಾನ್ಯಾಸ ಪೂರ್ವಕ ರುದ್ರಪಾರಾಯಣ, ಶತಕಲಶಾಭಿಷೇಕ, ಶ್ರೀ ರುದ್ರಯಾಗ, ಲಕ್ಷಲಿಂಗಪೂಜಾವೃತ ಉದ್ಯಾಪನಾ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net