ಮಲ್ಲಿಕಾರ್ಜುನ ಕೋ-ಆಪರೇಟಿವ್‌ಗೆ 68.55 ಲಕ್ಷ ರೂ ಲಾಭ

cooperative
ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2023-24ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ 2023-24ನೇ ವರದಿ ವರ್ಷದಲ್ಲಿ 149.12 ಕೋಟಿ ರೂ. ವ್ಯವಹಾರ ನಡೆಸಿ, 68,55,982.53ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘ ಅಧ್ಯಕ್ಷ ಕೃಷ್ಣ ನಾಯ್ಕ ಶೇಡಿಕೊಡ್ಲು ಹೇಳಿದರು.

ಭಾನುವಾರ ಸೊಸೈಟಿಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ ಈ ಸಾಲಿನಲ್ಲಿ 34.70 ಕೋಟಿ ರೂ. ಠೇವಣಿ ಸಂಗ್ರಹಿಸಿ, 25.07 ಕೋಟಿ ರೂ. ಸಾಲ ಹೊಂದಿರುತ್ತದೆ. ವಿವಿಧ ಸಂಸ್ಥೆಗಳಲ್ಲಿ 15.33 ಕೋಟಿ ರೂ. ಹೂಡಿಕೆ ಮಾಡಿದೆ. 5.45 ಕೋಟಿ ರೂ. ನಿಧಿಗಳು ಹೊಂದಿದೆ. ಸಂಘವು 5591 ಎ ತರಗತಿಯ ಸದಸ್ಯರನ್ನು ಹೊಂದಿದ್ದು, 1,49,90,500ರೂ. ಪಾಲು ಬಂಡವಾಳ ಹೊಂದಿದೆ ಎಂದರು.

ಸಂಘ ಉಪಾಧ್ಯಕ್ಷ ಸಿದ್ದಾರ್ಥ ನಾಯ್ಕ ಹಿಲಿಯಾಣ, ನಿರ್ದೇಶಕರಾದ ಎಚ್.ಬೆಳ್ಳ ನಾಯ್ಕ ಕೊಕ್ಕರ್ಣೆ, ಜಯಪ್ರಕಾಶ ನಾಯ್ಕ ಅಲ್ತಾರ್, ವಸಂತ ನಾಯ್ಕ ಒಳಬೈಲು, ದಿನೇಶ ನಾಯ್ಕ ಹೋರ್ಲಾಳಿ, ನರಸಿಂಹ ನಾಯ್ಕ ಯಡ್ತಾಡಿ, ಮಹಾದೇವ ನಾಯ್ಕ ಬಿಲ್ಲಾಡಿ, ಲಲಿತಾ ಬಿಲ್ಲಾಡಿ, ಪಾರ್ವತಿ ಗೋಳಿಯಂಗಡಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ನಾಯ್ಕ ಮಂದಾರ್ತಿ 2023-24ನೇ ಸಾಲಿನ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ವಸಂತ ನಾಯ್ಕ ಬಜೆಟ್ ಮಂಡನೆ ಮಾಡಿದರು. ಶಾಖಾಧಿಕಾರಿ ಕೃಷ್ಣ ನಾಯ್ಕ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿ ಗಣೇಶ ಮತ್ತು ಪ್ರಕಾಶ ವಿದ್ಯಾರ್ಥಿಗಳ ಪಟ್ಟಿ ವಾಚಿಸಿ, ಸಿಬ್ಬಂದಿ ವಿಘ್ನೇಶ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸಿದ್ದಾರ್ಥ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಮಹದೇವ ನಾಯ್ಕ ಬಿಲ್ಲಾಡಿ ವಂದಿಸಿದರು.

ಪ್ರತಿಭಾ ಪುರಸ್ಕಾರ

ನಾಟಿವೈದ್ಯೆ ಕಾವೇರಿ ಬಾಯಿ ಕೇದಿಕೆರೆ, ವಿದ್ಯುತ್ ಪವರ್‌ಮನ್ ಚಂದ್ರ ನಾಯ್ಕ ಮಂದಾರ್ತಿ, ಪ್ರಗತಿಪರ ಕೃಷಿಕ ದ್ಯಾವಣ್ಣ ನಾಯ್ಕ ಹರಿಮಕ್ಕಿ, ಯಕ್ಷಗಾನ ಭಾಗವತ ಗೋಪಾಲಕೃಷ್ಣ ಜಂಬೂರು, ರಾಷ್ಟ್ರಮಟ್ಟದ ಕ್ರೀಡಾ ಪಟು ಸಂದೀಪ್ ಚಗ್ರಿಬೆಟ್ಟು, ಮಹಿಳಾ ಕೃಷಿ ಸದಸ್ಯೆ ಬೆಳ್ಳಿ ಬಾಯಿ ಯಡ್ತಾಡಿ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ತೀರಾ ಹಿಂದುಳಿದ ಆರು ಮಂದಿ ಸದಸ್ಯರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು. ಮಹಾಸಭೆಯಲ್ಲಿ 126 ಸದಸ್ಯರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಾಗೂ ಇಂಜಿನಿಯರ್ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net