ಮಹಾಗಣಪತಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

Mul_Goury Shankara
Published on

ಮೂಲ್ಕಿ: ಪಡುಪಣಂಬೂರು ಹೊಯ್ಗೆಗುಡ್ಡೆ ಶ್ರೀ ಗೌರೀಶಂಕರ ಮಹಾಗಣಪತಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಶ್ರೀ ದೇವರ ಉತ್ಸವ ಬಲಿ ನಡೆಯಿತು.

ಕ್ಷೇತ್ರದ ಅರ್ಚಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ, ಶತ ರುದ್ರಾಭಿಷೇಕ, ಶ್ರೀ ದೇವರಿಗೆ ಸೀಯಾಳಾಭಿಷೇಕ, ಮಹಾ ಗಣಪತಿಯಾಗ, ಮಹಾಪೂಜೆ ನಡೆಯಿತು.ಸಂಜೆ ಭಕ್ತಿರಸಮಂಜರಿ, ಭಜನಾ ಕಾರ್ಯಕ್ರಮ, ರಾತ್ರಿ ರಂಗ ಪೂಜೆ, ದೇವರ ಬಲಿ ಉತ್ಸವ, ಮಹಾಪೂಜೆ, ಚಂದ್ರಮಂಡಲ, ರಜತಪಲ್ಲಕಿ ಉತ್ಸವ, ಮಹಾ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net