ತೆಂಕುತಿಟ್ಟು ಕಲಾವಿದ ಕೇದಗಡಿ ಸಂಸ್ಮರಣೆ : ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ

New Project (20)
Published on

ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ವಿಷ್ಣುಭಟ್ಟರ ಪ್ರಮುಖ ಶಿಷ್ಯರಲ್ಲೊಬ್ಬರಾದ ಕೇದಗಡಿ ಗುಡ್ಡಪ್ಪ ಗೌಡ ಸಂಸ್ಮರಣೆ ಇತ್ತೀಚೆಗೆ ಜರಗಿತು.

ಶ್ರೀ ದೇವರ ವಿಶೇಷ ಪೂಜಾರ್ಚನೆ, ಭಗವದ್ಗೀತಾ ಪಾರಾಯಣದೊಂದಿಗೆ ಸಮರ್ಪಿಸಲಾಯಿತು. ಬೆಳ್ಳಿಪ್ಪಾಡಿ ಸದಾಶಿವ ರೈ ಸಂಸ್ಮರಣಾ ಭಾಷಣಗೈದರು. ಪ್ರಮುಖರಾದ ವೆಂಕಟ್ರಮಣ, ನಾರಾಯಣ ದೇಲಂಪಾಡಿ ನುಡಿನಮನ ಸಲ್ಲಿಸಿದರು.

ಕಲಾ ಸಂದ ಅಧ್ಯಕ್ಷ ಡಾ.ರವಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಭಾಗವತ ಗುರುಗಳಾದ ವಿಶ್ವ ವಿನೋದ ಬನಾರಿ ರಚಿಸಿದ ಕೇದಗಡಿ ಸಂಸ್ಮರಣಾ ಗೀತೆಯನ್ನು ಭಾಗವತ ಮೋಹನ ಮೆಣಸಿನಕಾನ ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಪಡಿಸಿದರು.ವೇದಾವತಿ ಕೇದಗಡಿ ವಾತನಾಡಿದರು. ವಾಮದೇವ ಕೇದಗಡಿ ಸ್ವಾಗತಿಸಿದರು. ಪುಟಾಣಿಗಳಾದ ವಿಂದ್ಯಾ, ಮನ್ವಿತಾ ಹಾಗೂ ಅಥಿತಿ ಪ್ರಾರ್ಥಿಸಿದರು. ರಾಮಣ್ಣ ನಿರೂಪಿಸಿದರು.

ಮೋಹನ ಮೆಣಸಿನಕಾನ, ನಿತೀಶ್ ಕುವಾರ್ ಎಂಕಣ್ಣಮೂಲೆ, ವಿದ್ಯಾ ಈಶ್ವರಮಂಗಲ ಭಾಗವತಿಕೆಯಲ್ಲಿ, ಶ್ರೀಧರ ಆಚಾರ್ಯ ಈಶ್ವರಮಂಗಲ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಸದಾನಂದ ಮಯ್ಯಾಳ ಚೆಂಡೆಮದ್ದಳೆ ನಿನಾದದೊಂದಿಗೆ ಕರ್ಣಾವಸಾನ ಯಕ್ಷಗಾನ ತಾಳಮದ್ದಳೆ ನಡೆಯಿತು.

ಅರ್ಥಧಾರಿಗಳಾಗಿ ಐತ್ತಪ್ಪ ಗೌಡ ಮುದಿಯಾರು, ಬೆಳ್ಳಿಪ್ಪಾಡಿ ಸದಾಶಿವ ರೈ, ರವಾನಂದ ರೈ ದೇಲಂಪಾಡಿ, ರಾಮಣ್ಣ ದೇಲಂಪಾಡಿ, ನಾರಾಯಣ ದೇಲಂಪಾಡಿ, ವಾಮದೇವ ಕೇದಗಡಿ, ಬಾಲಕೃಷ್ಣ ಗೌಡ ದೇಲಂಪಾಡಿ, ರಾಮ ನಾಯ್ಕ ದೇಲಂಪಾಡಿ ಭಾಗವಹಿಸಿದ್ದರು. ಗೋಪಾಲಯ್ಯ ಕೋಟಿಗದ್ದೆ, ಶಾಂತಾಕುವಾರಿ ದೇಲಂಪಾಡಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಮೊದಲಾದವರಿದ್ದರು. ನಂದ ಕಿಶೋರ ಬನಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net