ಯಾವ ಜಿಲ್ಲೆಗೆ ಹೋದ್ರೂ ಪಕ್ಷದ ಕಚೇರಿಗೇ ಮೊದ್ಲು ಹೋಗೋದು- ಕಾರ್ಮಿಕ ಸಚಿವ ಹೆಬ್ಬಾರ

hebbar
Published on

ಹಾವೇರಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ವಿುಕರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಟ್ಟಡ ಕಾರ್ವಿುಕರು, ಕ್ಷೌರಿಕರು, ಅಗಸರಿಗೆ 1,200 ಕೋಟಿ ರೂ. ಸಹಾಯಧನವನ್ನು ಅತ್ಯಂತ ಪಾರದರ್ಶಕವಾಗಿ ವಿತರಿಸಲಾಗಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಯಾಪೈಸೆ ಭ್ರಷ್ಟಾಚಾರವಾಗದಂತೆ ಕಾರ್ವಿುಕರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಲಾಕ್​ಡೌನ್ ಸಮಯದಲ್ಲಿ ಕಾರ್ವಿುಕರ ಕಷ್ಟಕ್ಕೆ ಸ್ಪಂದಿಸಿ ಆಹಾರದ ಕಿಟ್ ವಿತರಣೆ ಸೇರಿ ವಿವಿಧ ಕ್ರಮ ಕೈಗೊಂಡು ಕಾರ್ವಿುಕರಲ್ಲಿ ಶಾಂತಿಯ ವಾತಾವರಣ ನಿರ್ವಿುಸಲಾಗಿದೆ. ಈಗ ಕಾರ್ವಿುಕರು ಕೆಲಸ ಆರಂಭಿಸಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.

ನಾನು ಯಾವ ಜಿಲ್ಲೆಗೆ ಹೋದರೂ ಮೊದಲು ಪಕ್ಷದ ಕಚೇರಿಗೆ ಹೋಗುತ್ತೇನೆ. ಸರ್ಕಾರ ಮತ್ತು ಪಕ್ಷ ಜೊತೆ ಜೊತೆಗೆ ಹೋಗಬೇಕು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಗೂ ಮೊದಲು ಪಕ್ಷದ ಕಚೇರಿಗೆ ಭೇಟಿ ನೀಡಿದ್ದೇನೆ. ಕಾರ್ವಿುಕ ಇಲಾಖೆಯ ಪ್ರಗತಿ, ನಮ್ಮ ಸರ್ಕಾರ ಕಾರ್ವಿುಕರಿಗೆ ಕೊಟ್ಟಿರುವ ಹೊಸ ಕಾರ್ಯಕ್ರಮ, ಲಾಕ್​ಡೌನ್ ಅವಧಿಯಲ್ಲಿ ನೀಡಿರುವ ಸಹಾಯಧನದ ಪ್ರಗತಿ ಪರಿಶೀಲನೆಗೆ ಎಲ್ಲ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net