ಕೂಲಿ ಕಾರ್ಮಿಕ ನಾಪತ್ತೆ

missing new
Published on

ಮಂಗಳೂರು: ಸುಲ್ತಾನ್ ಬತ್ತೇರಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಕೂಲಿ ಕಾರ್ಮಿಕ ಛತ್ತಿಸ್‌ಗಢ ಮೂಲಕ ರಾಮ್ ಬ್ರಿಕ್ಷಾ ಸಾಯಿ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ. ಛತ್ತೀಸ್‌ಗಢದ ಅಶೋಕ್ ರಾಮ್ ಎಂಬುವರ ಮೂಲಕ ಹತ್ತು ಜನರನ್ನು ಸೆ.3ರಂದು ಮಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. 5ರಂದು ಸಂಜೆ 6.30ಕ್ಕೆ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಂಗಡಿಗೆ ಹೋಗಿ ಬರುವುದಾಗಿ ಅಶೋಕ್‌ರಾಮ್ ಬಳಿ ತಿಳಿಸಿ, ಮರಳಿ ಬಂದಿರಲಿಲ್ಲ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net