ಕೂಲಿ ಕಾರ್ಮಿಕ ನಾಪತ್ತೆ

missing
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಾರಂಪಾಡಿ ನಿವಾಸಿ ರೋಶನ್ ಡಿ.ಸೋಜ(41)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸಹೋದರಿ, ತೂಮಿನಾಡು ನಿವಾಸಿ ಸರಿತಾ ಡಿ.ಸೋಜ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಕೂಲಿಕಾರ್ಮಿಕರಾಗಿರುವ ರೋಶನ್ ಡಿ.ಸೋಜ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಕಳೆದ ಕೆಲವು ದಿವಸಗಳಿಂದ ಅವರು ಹೊರಗೆಲ್ಲೂ ಕಾಣಿಸದಿರುವುದರಿದ ಸ್ಥಳೀಯರು ಇವರ ಸಹೋದರಿಗೆ ಮಾಹಿತಿ ನೀಡಿದ್ದರು. ಸಹೋದರಿ ಸರಿತಾ ಡಿ.ಸೋಜ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪ್ರಯೋಜನವಾಗದಿದ್ದಾಗ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net