ಯುವ ಸಂಘಟನೆಯಿಂದ ಅಭಿನಂದನೀಯ ಕಾರ್ಯ : ದೇವರಾಜ್ ಶ್ಲಾಘನೆ

New Project-3
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಗ್ರಾಮೀಣ ಪ್ರದೇಶದ ಅಸಂಘಟಿತ ಕಾರ್ಮಿಕ ವರ್ಗದ ಧ್ಯೇಯೋದ್ದೇಶ ರಕ್ಷಣೆಗಾಗಿ ಯುವ ಸಂಘಟನೆಯ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ದೇವರಾಜ್ ಹೇಳಿದರು

ಕಾರ್ನಾಡ್ ಯಂಗ್‌ಸ್ಟಾರ್ಸ್‌ ಅಸೋಸಿಯೇಶನ್ ಮತ್ತು ನೆಹರು ಯುವಕೇಂದ್ರ ಮಂಗಳೂರು ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ, ಇತರ ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಕಾರ್ಮಿಕ ಕಾರ್ಡ್ ನೋಂದಣಿ ಶಿಬಿರದಲ್ಲಿ ಮಾತನಾಡಿದರು.

ಕೊಲ್ನಾಡ್ ರಿಕ್ಷಾ ಯೂನಿಯನ್ ಅಧ್ಯಕ್ಷ ಯೋಗೀಶ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಶಿವಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದರು. ಮಾನ್ಯಾ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ವಂದಿಸಿದರು. ರಮೇಶ್ ಗುಂಡಾಲ್ ನಿರೂಪಿಸಿದರು. ಶಿಬಿರದಲ್ಲಿ 50 ಮಂದಿ ಸೌಲಭ್ಯ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net