ರಾಜಕೀಯ, ಸಾಂಸ್ಕೃತಿಕ ಉನ್ನತಿಗೆ ಸಹಕಾರಿ : ಸಚಿವ ಎಂ.ಬಿ.ರಾಜೇಶ್ ಅನಿಸಿಕೆ

Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣ ಸಾಧ್ಯವಾದ ಆಂದೋಲನವೇ ಕುಟುಂಬಶ್ರೀ ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಹೇಳಿದರು.

ಕಾಲಿಕ್ಕಡವು ಮೈದಾನದಲ್ಲಿ ಮೂರು ದಿನ ನಡೆದ ರಾಜ್ಯಮಟ್ಟದ ಕುಟುಂಬಶ್ರೀ ಸರ್ಗೋತ್ಸವ ಸಮಾರಂಭದ ಅಂಗವಾಗಿ ಭಾನುವಾರ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣೆಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಟ್ಟಿದ್ದನ್ನೆಲ್ಲಾ ಚಿನ್ನವನ್ನಾಗಿಸುವ ಸಾಮರ್ಥ್ಯ ಸ್ತ್ರೀಶಕ್ತಿಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಔನ್ನತ್ಯವನ್ನು ಸಾಧಿಸಲು ರಂಗ ಸರ್ಗೋತ್ಸವ ಪರಿಣಾಮಕಾರಿ ಎಂದು ಸಚಿವರು ತಿಳಿಸಿದರು.

ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಕುಟುಂಬಶ್ರೀ ಮಿಷನ್ ರಾಜ್ಯ ಆಡಳಿತ ಮಂಡಳಿ ಸದಸ್ಯೆ ಹಾಗೂ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ, ಕುಟುಂಬಶ್ರೀ ಆಡಳಿತ ಮಂಡಳಿ ಸದಸ್ಯ ಪಿ.ಕೆ.ಸೈನಬಾ ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಪಿಲಿಕ್ಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ, ಚೆರುವತ್ತೂರು ಗ್ರಾ.ಪಂ.ಅಧ್ಯಕ್ಷೆ ಸಿ.ವಿ.ಪ್ರತಿಲಾ, ಪಡನ್ನ ಗ್ರಾ.ಪಂ.ಅಧ್ಯಕ್ಷ ಪಿ.ವಿ.ಮುಹಮ್ಮದ್ ಅಸ್ಲಂ, ವಲಿಯಪರಂಬ ಗ್ರಾ.ಪಂ.ಅಧ್ಯಕ್ಷ ವಿ.ವಿ.ಸಜೀವನ್, ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವ, ಕೈಯೂರು-ಚಿಮೇನಿ ಗ್ರಾಪಂ ಉಪಾಧ್ಯಕ್ಷೆ ಎಂ. ಶಾಂತಾ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಶಕುಂತಲಾ, ಎಂ.ಮನು, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮೀ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಸುರೇಂದ್ರನ್ ಟಿ.ಟಿ., ಉದುಮ ಗ್ರಾ.ಪಂ.ಅಧ್ಯಕ್ಷ ಸಿ.ಎಸ್.ಅಧ್ಯಕ್ಷೆ ಕೆ.ಸನುಜಾ, ಕೋಡೋಂಬೆಳ್ಳೂರು ಸಿ.ಡಿ.ಎಸ್.ಅಧ್ಯಕ್ಷೆ ಸಿ.ಬಿಂದು, ಬಂದಡ್ಕ ಸಿ.ಡಿ ಎಸ್.ಅಧ್ಯಕ್ಷೆ ಎಂ.ಗುಲಾಬಿ, ಚೆಮ್ಮನಾಡ್ ಸಿಡಿಎಸ್ ಅಧ್ಯಕ್ಷೆ ಮುಮ್ತಾಝ್ ಅಬೂಬಕರ್, ವರ್ಕಾಡಿ ಸಿಡಿಎಸ್ ಅಧ್ಯಕ್ಷೆ ವಿಜಯಲಕ್ಷ್ಮೀ ಉಪಸ್ಥಿತರಿದ್ದು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net