ಬೆಂಗಳೂರು: ಉಪಚುನಾವಣೆ ಕೆಪಿಸಿಸಿ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನೇ ಎಐಸಿಸಿ ಕೂಡ ಅಂತಿಮಗೊಳಿಸಿದ್ದು, ಶಿರಾಕ್ಕೆ ಟಿ.ಬಿ.ಜಯಚಂದ್ರ ಮತ್ತು ಆರ್.ಆರ್.ನಗರದಿಂದ ಡಿ.ಕೆ.ರವಿ ಪತ್ನಿ ಕುಸುಮಾ ಕಣಕ್ಕೆ ಇಳಿಯಲಿದ್ದಾರೆ.
ಕಾಂಗ್ರೆಸ್ನಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೇ ಕುಸುಮಾ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಅಕ್ಟೋಬರ್ 4ರಂದು ಕಾಂಗ್ರೆಸ್ ಸೇರ್ಪಟೆಯಾಗಿದ್ದ ಕುಸುಮಾ, ಇವತ್ತು ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ತೆರಳಿದ್ದರು. ಈ ವೇಳೆ ಅವರ ತಂದೆ ಹನುಮಂತರಾಯಪ್ಪ ಕೂಡ ಇದ್ದರು.
ನಂತರ ಡಿ.ಕೆ.ಶಿವಕುಮಾರ್ ಅವರು ಯಶವಂತಪುರದ ಬಿಕೆ ನಗರದಲ್ಲಿ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದು, ಅದರಲ್ಲಿ ಕುಸುಮಾ ಮತ್ತು ಹನುಮಂತರಾಯಪ್ಪ ಪಾಲ್ಗೊಂಡಿದ್ದರು. (ದಿಗ್ವಿಜಯ ನ್ಯೂಸ್)