More

    ನಿರಂತರ ಉದ್ಯೋಗ ನೀಡುವ ನರೇಗಾ ಕೃಷಿಕರಿಗೆ ವರದಾನ

    ಕುಷ್ಟಗಿ: ನಿರಂತರ ಉದ್ಯೋಗ ನೀಡುವ ನರೇಗಾ ಯೋಜನೆ ಕೃಷಿಕರಿಗೆ ವರದಾನವಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.

    ತಾಲೂಕಿನ ಹಿರೇನಂದಿಹಾಳ ಗ್ರಾಪಂ ವ್ಯಾಪ್ತಿಯ ದೊಣ್ಣೆಗುಡ್ಡದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರು ಹಾಗೂ ಮತದಾನ ಹಕ್ಕು ಪಡೆದ ಪ್ರತಿಯೊಬ್ಬರು ಯಾವುದೇ ನೆಪ ಹೇಳದೆ ಮತ ಚಲಾಯಿಸಬೇಕಿದೆ. ಜಿಲ್ಲೆಯಲ್ಲಿ ಶೇ.100 ಮತದಾನದ ಗುರಿ ಹೊಂದಲಾಗಿದ್ದು, ಶೇ.90ರಷ್ಟಾದರೂ ಸಾಧನೆಗೆ ಶ್ರಮಿಸಬೇಕಿದೆ ಎಂದರು.

    ಇದನ್ನೂ ಓದಿ: ರೈತನ ಕೈ ಹಿಡಿದ ನರೇಗಾ ಯೋಜನೆ: ಹೊಲದಲ್ಲಿ ಶೆಡ್ ನಿರ್ಮಿಸಿಕೊಂಡು ಮೇಕೆ-ಕೋಳಿ ಸಾಕಣೆ

    ಜೆಜೆಎಂ, ಎಸ್‌ಬಿಎಂ, ವಸತಿ ಯೋಜನೆಗಳ ಕುರಿತು ನರೇಗಾ ಕೂಲಿಕಾರರ ಜತೆ ಚರ್ಚಿಸಿದರು. ತಳುವಗೇರಾ ಗ್ರಾಪಂ ವ್ಯಾಪ್ತಿಯ ವಣಗೇರಾದ ಯುವ ಮತಗಟ್ಟೆ ವೀಕ್ಷಿಸಿ ಮೂಲ ಸೌಕರ್ಯ ಪರಿಶೀಲಿಸಿದರು. ಕ್ಯಾದಿಗುಪ್ಪ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಕರ್ತವ್ಯ ನಿರತರಿಗೆ ನೀರು ನೆರಳಿನ ವ್ಯವಸ್ಥೆ ಪರಿಶೀಲಿಸಿದರು.

    ತಾಪಂ ಇಒ ಹನುಮಂತಗೌಡ ಪಾಟೀಲ್, ನರೇಗಾ ಸಹಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಪಿಡಿಒಗಳಾದ ಪ್ರಶಾಂತ ಹಿರೇಮಠ, ಪಿ.ಶ್ರೀಶೈಲ, ಅಂಬುಜಾ ಪಾಟೀಲ್, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts