More

    ರೈತನ ಕೈ ಹಿಡಿದ ನರೇಗಾ ಯೋಜನೆ: ಹೊಲದಲ್ಲಿ ಶೆಡ್ ನಿರ್ಮಿಸಿಕೊಂಡು ಮೇಕೆ-ಕೋಳಿ ಸಾಕಣೆ

    ಕುಷ್ಟಗಿ: ನರೇಗಾ ಯೋಜನೆಯಡಿ ಶೆಡ್ ನಿರ್ಮಿಸಿಕೊಂಡಿರುವ ಹಿರೇಬನ್ನಿಗೋಳ ಗ್ರಾಮದ ರೈತ ಶರಣಪ್ಪ ತಳವಾರ್ ಮೇಕೆ ಸಾಕಣೆ ಮೂಲಕ ಆದಾಯದ ಮೂಲ ಕಂಡುಕೊಂಡಿದ್ದಾರೆ.

    ಸೂಕ್ತ ರಕ್ಷಣೆ ಇಲ್ಲದೆ ಜಾನುವಾರುಗಳ ಸಾವು-ನೋವು ಸಂಭವಿಸುವುದರ ಜತೆಗೆ ಕಳ್ಳತನವಾಗುತ್ತಿದ್ದರಿಂದ ದನಗಳ ಸಾಕಣೆಗೆ ಹಿಂದೇಟು ಹಾಕಿದ್ದ ಶರಣಪ್ಪ, ಗ್ರಾಪಂ ಅಧಿಕಾರಿಗಳ ಸಲಹೆ ಪಡೆದು 68ಸಾವಿರ ರೂ.ವೆಚ್ಚದ ಶೆಡ್ ನಿರ್ಮಿಸಿಕೊಂಡು ಮೇಕೆ ಸಾಕಣೆ ಮಾಡುತ್ತಿದ್ದಾರೆ. ಲಭ್ಯ 2.7ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಗೂ ಇತರ ಬೆಳೆ ಬೆಳೆಯುತ್ತಿದ್ದ ರೈತ ಶರಣಪ್ಪಗೆ ವಾರ್ಷಿಕ 25ಸಾವಿರ ರೂ. ಸಹ ಕೈ ಸೇರುತ್ತಿರಲಿಲ್ಲ. ಶೆಡ್ ನಿರ್ಮಾಣದ ನಂತರ ಬಾಗಲಕೋಟೆಗೆ ತೆರಳಿ 10 ಮೇಕೆ ಮರಿಗಳನ್ನು ಖರೀದಿಸಿ ಸಾಕಣೆ ಆರಂಭಿಸಿ ಇದೀಗ 23 ಮೇಕೆಗಳ ಒಡೆಯನಾಗಿದ್ದಾನೆ.

    ಶೆಡ್ ಕೆಳಗೆ ಕೋಳಿ ಸಾಕಣೆ ಮಾಡುತ್ತಿದ್ದು, ಮೇಕೆಗಳ ಜತೆ 40 ಕೋಳಿಗಳೂ ಆದಾಯ ತಂದುಕೊಡುತ್ತಿವೆ. ಮೇಕೆ ಹಾಗೂ ಕೋಳಿ ಮಾರಾಟದಿಂದ ವಾರ್ಷಿಕ 2.5 ರಿಂದ 3 ಲಕ್ಷ ರೂ. ಆದಾಯ ಕಂಡುಕೊಳ್ಳುತ್ತಿದ್ದಾರೆ. ದೂರದ ಬೆಂಗಳೂರು, ಮಂಗಳೂರು, ಗೋವಾಗಳಿಗೆ ಗುಳೆ ಹೋಗುವ ಬದಲು ನರೇಗಾ ಯೋಜನೆಯ ಸದುಪಯೋಗ ಪಡೆದರೆ ಕೂಲಿ ಕೆಲಸದ ಜತೆಗೆ ಸ್ವಯಂ ಉದ್ಯೋಗ ಕೈಗೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ರೈತ ಶರಣಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts