ನಟಿ 'ಖುಷ್ಬೂ' ಆರೋಗ್ಯದಲ್ಲಿ ಏರುಪೇರು..ಆಸ್ಪತ್ರೆಗೆ ದಾಖಲು

Kushboo Sundar
Published on

ಹೈದರಾಬಾದ್ : ಖ್ಯಾತ ನಟಿ ಖುಷ್ಬೂ ಸುಂದರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಸೋಶಿಯಲ್​​ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನ್ನನ್ನು ಕೊಲ್ಲುತ್ತಿದೆ. ಹೀಗಾಗಿ ನಾನು ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯ ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ. ಜತೆಗೆ ಆಸ್ಪತ್ರೆಯ ಬೆಡ್ ಮೇಲೆ ಇರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇನ್ನು ಯಾರಿಗಾದ್ರು ವೈರಸ್ ತಗುಲಿರುವ ಲಕ್ಷಣಗಳು ಕಂಡು ಬಂದ್ರೆ ನಿರ್ಲಕ್ಷಿಸಬೇಡಿ. ಆದ್ರೆ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಾನು ಹುಷಾರಾಗಿದ್ದೇನೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸುತ್ತಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆ ಯಶಸ್ವಿ ನಿರ್ಮಾಪಕಿ ಕೂಡ ಆಗಿದ್ದಾರೆ, ಉದ್ಯಮಿ ಮತ್ತು ರಾಜಕಾರಣಿಯಾಗಿಯೂ ಜನಪ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net