

ಗುರುಪುರ: ಸಮಾಜದಲ್ಲಿ ಬಡಜನರ ಕಣ್ಣೊರೆಸುವ ಮತ್ತು ಅಶಕ್ತರ ಮಕ್ಕಳ ವಿದ್ಯಾಭಾಸಕ್ಕೆ ನೆರವಾಗುವ ಕೆಲಸಗಳಿಗೆ ವಿಶೇಷ ಮಹತ್ವವಿದೆ. ಮಾನವೀಯ ಗುಣಗಳು ಹಿಂದಕ್ಕೆ ಸರಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಕುಪ್ಪೆಪದವಿನಲ್ಲಿ ಹುಟ್ಟಿಕೊಂಡ ವರಾಹ ಫೌಂಡೇಶನ್ ಇತರರಿಗೆ ಮಾದರಿಯಾಗಲಿ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕುಪ್ಪೆಪದವು ಚರ್ಚ್ ವಠಾರದಲ್ಲಿ ಭಾನುವಾರ ಕಾಂಗ್ರೆಸ್ ನಾಯಕ ಗಿರೀಶ್ ಆಳ್ವ ಸ್ಥಾಪಿಸಿದ ವರಾಹ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಒಂದು ಉತ್ತಮ ಉದ್ದೇಶವಿಟ್ಟುಕೊಂಡು ಸ್ಥಾಪಿಸಲಾಗಿರುವ ವರಾಹ ಫೌಂಡೇಶನ್ನಿಂದ ಅಶಕ್ತರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸಗಳು ನಡೆಯಲಿ ಎಂದರು.
ಗಿರೀಶ್ ಆಳ್ವರ ತಂದೆ ಕೆ.ಕೋಚಣ್ಣ ಆಳ್ವ ಕಂಗಿನಡಿ ವರಾಹ ಫೌಂಡೇಶನ್ ಅನಾವರಣಗೊಳಿಸಿದರು. ಕುಪ್ಪೆಪದವು ಚರ್ಚ್ ಧರ್ಮಗುರು ಫಾ.ಮಾರ್ಸೆಲ್ ಸಲ್ಡಾನ, ಕುಪ್ಪೆಪದವು ಜುಮ್ಮಾ ಮಸೀದಿ ಧರ್ಮಗುರು ಅಬ್ದುಲ್ ಸಲಾಂ, ಎಂಎಲ್ಸಿ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಹರೀಶ್ ಕುಮಾರ್, ಪೃಥ್ವಿರಾಜ್ ಆರ್.ಕೆ, ಪದ್ಮನಾಭ ಕೋಟ್ಯಾನ್(ಬಿಎಲ್ಪಿ), ಚಂದ್ರಪ್ರಕಾಶ್ ತುಂಬೆ, ಪದ್ಮರಾಜ ಪೂಜಾರಿ, ಅನಿಲ್ ಕುಮಾರ್ ಮಂಗಳೂರು, ಹರಿಯಪ್ಪ ಮುತ್ತೂರು, ಇಬ್ರಾಹಿಂ ನವಾಝ್, ಅಬ್ದುಲ್ ಅಝೀಝ್, ಅಬ್ದುಲ್ ರಜಾಕ್, ಕುಪ್ಪೆಪದವು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಕಜೆ, ಶೇಖ್ ಮುಹಮ್ಮದ್ ಇರ್ಫಾನಿ, ಸಮಾಗಮ ಪುರುಷೋತ್ತಮ, ಉದ್ಯಮಿ ಜಗದೀಶ ಕುಲಾಲ್ ಪಾಕಜೆ, ಸತೀಶ್ ಪೂಜಾರಿ ಬಳ್ಳಾಜೆ, ನಾಗೇಶ್ ಶೆಟ್ಟಿ, ವಿಶ್ವನಾಥ ಪಾಕಜೆ, ಚಂದ್ರಹಾಸ ಶೆಟ್ಟಿ ಮುತ್ತೂರು, ಕೃಷ್ಣ ಆಸ್ರಣ್ಣ, ನೀಲಯ ಎಂ.ಅಗರಿ, ವಸಂತ ಆಚಾರಿ ಮೊದಲಾದವರಿದ್ದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೆಹಮಾನ್ ಕುಂಜತ್ತಬೈಲು ವಂದಿಸಿದರು.
ಆರೋಗ್ಯ ತಪಾಸಣಾ ಶಿಬಿರ
ವರಾಹ ಫೌಂಡೇಶನ್ ಉದ್ಘಾಟನೆಯ ಜತೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅಂಚೆ ಯೋಜನಾ ನೋಂದಣಿ, ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಆಧಾರ್ ತಿದ್ದುಪಡಿ ಶಿಬಿರ ನಡೆಯಿತು. ನೂರಾರು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡರು.