ಭಕ್ತಿಯ ಆರಾಧನೆಯಿಂದ ಒಳಿತು : ಜುಬಿನ್ ಮೊಹಪಾತ್ರ ಅಭಿಮತ

New Project
Published on

ಸುಬ್ರಹ್ಮಣ್ಯ: ದುಷ್ಟರಿಗೆ ಶಿಕ್ಷೆ ನೀಡಿದ ಶ್ರೀ ದೇವರ ಮಹಾತ್ಮೆಯನ್ನು ಸರ್ವರೂ ತಿಳಿದುಕೊಳ್ಳಬೇಕು. ಭಕ್ತಿಯಿಂದ ಶ್ರೀ ದೇವರ ಆರಾಧನೆ ಮಾಡಿದರೆ ಸುಬ್ರಹ್ಮಣ್ಯ ದೇವರು ಸದಾ ಒಳಿತನ್ನು ಮಾಡಿತ್ತಾನೆ. ಕುಕ್ಕೆಯ ಪುಣ್ಯದ ಮಣ್ಣಿನಲ್ಲಿ ಕುಣಿತ ಭಜನೆ ಮೂಲಕ ಸೇವೆ ನೆರವೇರಿಸುವುದು ಭಾಗ್ಯವೇ ಸರಿ. ಚಂಪಾಷಷ್ಠಿ ಜಾತ್ರೆ ಕೆಟ್ಟದರ ವಿರುದ್ಧ ವಿಜಯದ ಸಂಕೇತ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಲಕ್ಷದೀಪೋತ್ಸವದ ಸುದಿನ ನಡೆದ ಅಖಂಡ ಕುಣಿತ ಭಜನೆ ಉದ್ಘಾಟಿಸಿ ಮಾತನಾಡಿದರು.

ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಮಾಜಿ ಸದಸ್ಯ ಶಿವರಾಮ ರೈ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಕಲಾವಿದ ಯೋಗೀಶ್ ಕಿಣಿ ಕಾರ್ಕಳ ಉಪಸ್ಥಿತರಿದ್ದರು. 121 ತಂಡಗಳಿಂದ ಕುಣಿತ ಭಜನಾ ಸೇವೆ ಆರಂಭಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net