ಕೋಟೇಶ್ವರ ಕೆಪಿಎಸ್ ಶಾಲೆಗೆ ಗರಿಷ್ಠ ಪ್ರಶಸ್ತಿ

sports
ತಾಲೂಕು ಕ್ರೀಡಾಕೂಟದಲ್ಲಿ ಕೆಪಿಎಸ್ ಕೋಟೇಶ್ವರದ ಸಾಧನೆ
Published on

ಕೋಟ: ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ತೆಕ್ಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಅತಿ ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ.

ಉದ್ದ ಜಿಗಿತದಲ್ಲಿ ಸುಭಾನ್ ಪ್ರಥಮ, ಎತ್ತರ ಜಿಗಿತದಲ್ಲಿ ವೈಷ್ಣವಿ ಪ್ರಥಮ, 80 ಮೀಟರ್ ಹರ್ಡಲ್ಸ್‌ನಲ್ಲಿ ಪ್ರತೀಕ್ ದ್ವಿತೀಯ, ಎತ್ತರ ಜಿಗಿತದಲ್ಲಿ ನವಜಿತ್ ದ್ವಿತೀಯ, 800 ಮೀಟರ್ ಓಟದಲ್ಲಿ ಅವನಿ ತೃತೀಯ, ಡಿಸ್ಕಸ್ ಥ್ರೋನಲ್ಲಿ ರುದ್ರ ದ್ವಿತೀಯ, 14ರ ವಯೋಮಾನದ ಬಾಲಕರ 4*100 ರಿಲೇಯಲ್ಲಿ ದ್ವಿತೀಯ, 17ರ ವಯೋಮಾನದ 4*100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಈ ಮೂಲಕ ಕೆಪಿಎಸ್ ಕುಂದಾಪುರ 2 ಚಿನ್ನ, 11 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದಿದೆ. ಉಪಪ್ರಾಂಶಪಾಲ ಚಂದ್ರಶೇಖರ್ ಶೆಟ್ಟಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net