ಮದ್ಯವ್ಯಸನ ಮುಕ್ತಿಯಿಂದ ನವಜೀವನ

camp
ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರು ಮಾತನಾಡಿದರು. ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ ಆರ್ಡಿ, ಆರ್.ನವೀನ್ಚಂದ್ರ ಶೆಟ್ಟಿ ರಟ್ಟಾಡಿ ಮತ್ತಿತರರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಆರ್ಡಿ

ಮದ್ಯವ್ಯಸನ ಹಾಗೂ ದುಶ್ಚಟಗಳು ಜನರ ಜೀವನ ಹಾಳು ಮಾಡುವುದರೊಂದಿಗೆ ಕೆಟ್ಟ ದಾರಿ ಹಿಡಿಸುತ್ತದೆ. ಮದ್ಯವ್ಯಸನದಿಂದ ಮುಕ್ತಿ ಹೊಂದಿ ನವಜೀವನದೊಂದಿಗೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಕುಂದಾಪುರ ಜನಜಾಗೃತಿ ವೇದಿಕೆ ಸ್ಫಾಪಾಕಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರು ಹೇಳಿದರು.

ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಕಮಲ ವಿಠ್ಠಲ ಸಭಾಭವನದಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆರ್ಡಿ, ಬೆಳ್ವೆ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 1869ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ಮಾತನಾಡಿದರು.

ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಶಿಬಿರ ವ್ಯವಸ್ಥಾಪನಾ ಸಮಿತಿ ಆರ್ಡಿ ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ನವೀನ್ಚಂದ್ರ ಶೆಟ್ಟಿ ರಟ್ಟಾಡಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಲೋಕೋಪಯೋಗಿ ಇಲಾಖೆ ಕುಂದಾಪುರ ವಿಭಾಗ ಅಭಿಯಂತ ಮಹಾಬಲ ನಾಯ್ಕ ಅಲ್ಬಾಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಸದಸ್ಯ ಸುಧಾಕರ ಶೆಟ್ಟಿ ಅರಸಮ್ಮಕಾನು, ಸುದರ್ಶನ ಶೆಟ್ಟಿ ಆರ್ಡಿ, ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಕಾರ್ಕಳ ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯಕುಮಾರ್ ಹೆಗ್ಡೆ, ಸ್ಥಾಪಾಕಾಧ್ಯಕ್ಷ ಮಹಾವೀರ ಹೆಗ್ಡೆ, ಸದಸ್ಯ ಕಾಂತಿರಾಜ್ ಜೈನ್, ಹೆಬ್ರಿ ಕೇಂದ್ರ ಸಮಿತಿ ಒಕ್ಕೂಟ ಅಧ್ಯಕ್ಷ ಪ್ರವೀಣ ಹೆಗ್ಡೆ, ಬೆಳ್ವೆ ವಲಯ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಅಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಹೆಬ್ರಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಗೋಪಾಲ ಕುಲಾಲ್, ಬೆಳ್ವೆ ನವಜೀವನ ಸಮಿತಿ ಅಧ್ಯಕ್ಷ ಉದಯ ಆಚಾರಿ, ಬೆಳ್ವೆ ವಲಯದ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಹೇಮಂತ್ ಪೂಜಾರಿ, ಪ್ರಹ್ಲಾದ್ ಶೆಟ್ಟಿ ಆರ್ಡಿ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿ, ಹೆಬ್ರಿ ವಲಯ ಮೇಲ್ವಿಚಾರಕ ಉದಯ, ಕೃಷಿ ಅಧಿಕಾರಿ ಉಮೇಶ್, ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಶೆಟ್ಟಿ ಆರ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net