ಕುಂದಾಪುರ ಪ್ರೌಢಶಾಲಾ ಶಾಲಾ ಸಂಸತ್ತು : ಚುನಾವಣೆ ವೀಕ್ಷಿಸಿದ ಉಪವಿಭಾಗಾಧಿಕಾರಿ

samsattu
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ ಶಾಲಾ ಸಂಸತ್ತು ಚುನಾವಣೆ ಉಪವಿಭಾಗಾಧಿಕಾರಿ ವೀಕ್ಷಿಸಿದರು
Published on

ಗಂಗೊಳ್ಳಿ : ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ 2024-25ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಮೊಬೈಲ್ ಇವಿಎಂ ಮೂಲಕ ಗುರುವಾರ ನಡೆಯಿತು. ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಕಿರಣ ಹೆಗ್ಡೆ ಮುಖ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್.ಮತ್ತು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಕಾಲೇಜಿಗೆ ಭೇಟಿ ನೀಡಿ, ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಲಾ ನಾಯಕನಾಗಿ ಸಾಯಿಪ್ರಣಾಮ್ ಮತ್ತು ಉಪನಾಯಕನಾಗಿ ಸೀಮಂತ ಆಯ್ಕೆಯಾದರು. ಶಾಲೆ ಶಿಕ್ಷಕ ಮತ್ತು ಶಿಕ್ಷಕಿಯರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net