ಕುಮಟಾ:ಕನ್ನಡದ ನಂ1 ದಿನಪತ್ರಿಕೆ `ವಿಜಯವಾಣಿ’ ಆಯೋಜಿಸಿದ್ದ `ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಕುಮಟಾ, ಹೊನ್ನಾವರ ವಿಧಾನಸಭಾ ಕ್ಷೇತ್ರದ ವಿಜೇತರ ಆಯ್ಕೆ ಪ್ರಕ್ರಿಯು ಶುಕ್ರವಾರ ಪಟ್ಟಣದ ಹಳೇ ಮೀನುಪೇಟೆ ರಸ್ತೆಯ ಖೂಬಸೂರತ್ ಕಲಾ ಕೇಂದ್ರದಲ್ಲಿ ನಡೆಯಿತು.
ಆಗಸ್ಟ್ 1ರಿಂದ ಸೆಪ್ಟೆಂಬರ್ 15 ರವರೆಗೆ ನಡೆದ ಸ್ಪರ್ಧೆಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ 2 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧಾರ್ಥಿಗಳು ಭರ್ತಿ ಮಾಡಿದ ಉತ್ತರದ ಚೀಟಿಗಳಲ್ಲಿ ಐದು ಚೀಟಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯಶಸ್ವಿನಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಆಯ್ಕೆ ಮಾಡಿದರು. ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಪಾರದರ್ಶಕವಾಗಿ ನಡೆಸಲಾಯಿತು.
ಇದನ್ನೂ ಓದಿ: ಹಳಿಯಾಳ ನಾರಿ ನಿನಗೊಂದು ಸ್ಯಾರಿ ವಿಜೇತರು
ವಿಜೇತರ ಘೋಷಣೆಯ ನಂತರ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕುಮಟಾ ಯೋಜನಾಽಕಾರಿ ಕಲ್ಮೇಶ ಎಂ., `ವಿಜಯವಾಣಿ’ ಪತ್ರಿಕೆ ಸಾಕಷ್ಟು ಉತ್ತಮ ಸುದ್ದಿ, ಲೇಖನಗಳನ್ನು ನೀಡುತ್ತಿದೆ. ಮಹಿಳೆಯರನ್ನು ತಲುಪುವ ದೃಷ್ಟಿಯಿಂದ `ನಾರಿ ನಿನಗೊಂದು ಸ್ಯಾರಿ’ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಿರುವುದು ಪತ್ರಿಕೆಯ ಜನಪ್ರತಿಯತೆಗೆ ಸಾಕ್ಷಿ ಎಂದರು.
ಮೇಲ್ವಿಚಾರಕಿ ನೇತ್ರಾವತಿ ಜಿ.ಗೌಡ, ವಿಜಯವಾಣಿ ಪತ್ರಿಕೆಯ ಕಾಯಂ ಓದುಗಳಾಗಿದ್ದೇನೆ. ಪತ್ರಿಕೆ ಅತ್ಯುತ್ತಮ ಅಂಶಗಳನ್ನು ಜನರಿಗೆ ತಲುಪಿಸುತ್ತಿದೆ. ಸೀರೆ ಎಂದರೆ ಭಾರತೀಯ ಸಂಸ್ಕೃತಿಯ ಪ್ರತೀಕ.ಅದರ ಸಲುವಾಗಿ ಸ್ಪರ್ಧೆ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಸೇವಾ ಪ್ರತಿನಿಧಿ ಗಳಾದ ಸುಮಾ ಚೇಳಕರ್, ಗಿರಿಜಾ ಭಟ್, ತುಳಸಿ ಹರಿಜನ, ಸದಸ್ಯರಾದ ಜಯಾ ಶೇಟ್, ಸೀಮಾ ಕಿಣಿ, ಪದ್ಮಾ, ಸಂಧ್ಯಾ, ಅನುಷಾ ಕುಮಟಾ, ಪದ್ಮಾವತಿ, ಚಂದ್ರಕಲಾ ಶೇಟ್, ಮಹಾಲಕ್ಷ್ಮೀ ಶೇಟ್ `ವಿಜಯವಾಣಿ’ ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ, ಪ್ರಸಾರಾಂಗ ಪ್ರತಿನಿಧಿ ಆತ್ಮಾನಂದ ಮಡಿವಾಳರ ಕುಮಟಾ ವರದಿಗಾರ ಶಂಕರ ಶರ್ಮಾ ಇದ್ದರು.
ವಿಜೇತರಿವರು
*ರೇಖಾ ಆರ್.ಪ್ರಭು, ಕಟ್ಟಿಕೇರಿ, ಮೂರೂರು ಕುಮಟಾ
*ಮಂಗಳಗೌರಿ ವಿ.ನಾಯ್ಕ, ಕರ್ಕಿ ಹೊನ್ನಾವರ
*ಸವಿತಾ ಪಿ.ನಾಯ್ಕ, ಬಂಕಿಕೊಡ್ಲ ಗೋಕರ್ಣ
*ಸುವರ್ಣ ಗಣಪತಿ ಭಾಗ್ವತ, ಹಂದಿಗೋಣ ಕುಮಟಾ
*ಸಂಜನಾ ಜಿ.ನಾಯ್ಕ ಹೊಲನಗದ್ದೆ ಕುಮಟಾ