More

    ಹಳಿಯಾಳ ನಾರಿ ನಿನಗೊಂದು ಸ್ಯಾರಿ ವಿಜೇತರು

    ಹಳಿಯಾಳ: ಕನ್ನಡದ ನಂ1 ದಿನಪತ್ರಿಕೆ `ವಿಜಯವಾಣಿ’ ಆಯೋಜಿಸಿದ್ದ `ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ವಿಜೇತರ ಆಯ್ಕೆ ಪ್ರಕ್ರಿಯು ಗುರುವಾರ ಪಟ್ಟಣದ ಜೀಜಾಮಾತಾ ಮಹಿಳಾ ಸಂಘದ ಕಚೇರಿಯಲ್ಲಿ ನಡೆಯಿತು.
    ಸ್ಪರ್ಧಾರ್ಥಿಗಳು ಭರ್ತಿ ಮಾಡಿದ ಉತ್ತರದ ಚೀಟಿಗಳಲ್ಲಿ ಐದು ಚೀಟಿಗಳನ್ನು ಮಹಿಳಾ ಸಂಘಗಳ ಸದಸ್ಯರು ಆಯ್ಕೆ ಮಾಡಿದರು. ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಪಾರದರ್ಶಕವಾಗಿ ನಡೆಸಲಾಯಿತು.

    ಇದನ್ನೂ ಓದಿ:ನಾರಿ ನಿನಗೊಂದು ಸ್ಯಾರಿ ಭಟ್ಕಳ‌ ವಿಜೇತರು
    ವಿಜೇತರ ಘೋಷಣೆಯ ನಂತರ ಮಾತನಾಡಿದ ಸಂಘದ ಅಧ್ಯಕ್ಷೆ ಮಂಗಲಾ ಪೀತಾಂಬರ ಕಶೀಲಕರ್ ಅವರು, `ವಿಜಯವಾಣಿ’ ಪತ್ರಿಕೆಯನ್ನು ಮೊಲಿನಿಂದಲೂ ಕೊಂಡು ಓದುತ್ತಿದ್ದೇನೆ. ಅದರಲ್ಲಿ ಉತ್ತಮ ಸುದ್ದಿಗಳು ಬರುತ್ತವೆ. ಅಲ್ಲದೆ, ಉತ್ತಮ ಅಂಕಣಗಳನ್ನು ವಿಜಯವಾಣಿ ಪ್ರಕಟಿಸುತ್ತಿದೆ. ಮಹಿಳೆಯರ ಸಲುವಾಗಿ ಹಲವು ಅಂಕಣಗಳನ್ನು ಪ್ರಕಟಿಸುತ್ತಿದೆ. ಮಹಿಳೆಯರಿಗೆ ಸೀರೆ ಎಂದರೆ ತುಂಬಾ ಇಷ್ಟ `ನಾರಿ ನಿನಗೊಂದು ಸ್ಯಾರಿ’ ಎಂಬ ಸ್ಪರ್ಧೆಯನ್ನು ಆಯೋಜಿಸಿ ಓದುಗರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಹೆಚ್ಚಿಸುತ್ತಿರುವುದು ಸಂತಸದ ಸಂಗತಿ ಎಂದರು.
    ಭಾರತಿ ಎಸ್.ಭಿರ್ಜೆ ಮಾತನಾಡಿ, ಮಹಿಳೆಯರು ಸೀರೆಯನ್ನು ಬಂಗಾರಕ್ಕಿAತ ಹೆಚ್ಚು ಇಷ್ಟಪಡುತ್ತಾರೆ. ಅದು ಸಂಸ್ಕೃತಿಯ ಪ್ರತೀಕ. ಮಹಿಳೆಯರ ಆಸಕ್ತಿಯ ವಿಷಯವನ್ನು ಗುರುತಿಸಿ ಸ್ಪರ್ಧೆ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದರು. ಸಂಘಟನೆಯ ಲತಾ ಎನ್.ಅಸೂಕರ್, ಲತಾ ಕೋಲೆಕರ್, ರೇಖಾ ಮಾಂಗ್ಲಿ, ರೇಣುಕಾ ಮಾಚಕ ಇತರರು ಇದ್ದರು. ವಿಜಯವಾಣಿ ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ, ಪ್ರಸಾರಾಂಗ ವ್ಯವಸ್ಥಾಪಕ ಅಶೋಕ ಗೋಟಗೋಡಿ, ಹಳಿಯಾಳ ವರದಿಗಾರ ಯೋಗರಾಜ ಎಸ್.ಕೆ. ಇದ್ದರು.
    ಉತ್ತಮ ಸ್ಪಂದನೆ
    ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ ಜರುಗಿದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಓದುಗರು ಪ್ರತಿ ದಿನ ಉತ್ತರಗಳನ್ನು ಭರ್ತಿ ಮಾಡಿ `ವಿಜಯವಾಣಿ’ ಕಚೇರಿಗೆ ತಲುಪಿಸಿದ್ದರು. ಸ್ಪರ್ಧೆಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಗುರುವಾರ ಹಳಿಯಾಳ ಕ್ಷೇತ್ರದ ಐವರು ಅದೃಷ್ಟಶಾಲಿಗಳ ಆಯ್ಕೆ ನಡೆದಿದ್ದು. ಭಟ್ಕಳ, ಶಿರಸಿ ಕ್ಷೇತ್ರದ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಶೀಘ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇತರ 3 ವಿಧಾನಸಭಾ ಕ್ಷೇತ್ರಗಳ ವಿಜೇತರ ಆಯ್ಕೆ ಪ್ರಕ್ರಿಯೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
    ವಿಜೇತರಿವರು
    *ಕಲಾವತಿ ಮ. ಚಕ್ರಸಾಲಿ, ಕಸಬಾಗಲ್ಲಿ, ಹಳಿಯಾಳ
    *ಉಮಾ ಎನ್.ಹೆಗಡೆ, ಬಝಾರ್ ರೋಡ್ ಹಳಿಯಾಳ
    *ಸಕ್ಕುಬಾಯಿ ವಿ.ಗೌಡ ಮುರ್ಕವಾಡ, ಹಳಿಯಾಳ
    *ನಂದಿನಿ ಪಿ.ನಾಯ್ಕ, ಶಿಕ್ಷಕಿ ದಾಂಡೇಲಿ
    *ಮೂಕಾಂಬಿಕಾ ಬಸವೇಶ್ವರನಗರ ದಾಂಡೇಲಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts